Sunday, August 14, 2022
spot_imgspot_img
spot_imgspot_img

ಮಂಗಳೂರು: ಹಾಲಿನ ಬೂತ್‌ನಲ್ಲಿ ಅಗ್ನಿ ಅವಘಡ; ಲಕ್ಷಾಂತರ ರೂ. ಸೊತ್ತು ನಷ್ಟ

- Advertisement -G L Acharya G L Acharya
- Advertisement -

ಮಂಗಳೂರು: ನಗರದ ಹೊರವಲಯದ ಕುಲಶೇಖರ ಸಮೀಪದ ಸಿಲ್ವರ್ ಗೇಟ್ ಬಳಿಯ ನಂದಿನಿ ಹಾಲಿನ ಬೂತ್ ಶುಕ್ರವಾರ ತಡರಾತ್ರಿ ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ.

ವಿಕಲಚೇತನರಾಗಿರುವ ವಸಂತ ಕುಮಾರ್ ಎಂಬವರಿಗೆ ಸೇರಿದ ವಿಜೇತ್ ನಂದಿನಿ ಮಿಲ್ಕ್ ಪಾರ್ಲರ್ ಎಂಬ ಹೆಸರಿನ ಈ ಹಾಲಿನ ಬೂತ್‌ನಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಸುಮಾರು 2:25ರ ಬಳಿಕ ಕದ್ರಿ ಅಗ್ನಿಶಾಮಕ ಠಾಣೆಗೆ ಬಂದ ಕರೆಯಂತೆ ಸ್ಥಳಕ್ಕೆ ತೆರಳಿದಾಗ ಹಾಲಿನ ಬೂತ್ ಭಾಗಶಃ ಸುಟ್ಟು ಹೋಗಿದೆ.

ಬೂತ್‌ನೊಳಗಿದ್ದ ಸುಮಾರು 500 ಲೀ.ನಷ್ಟು ಹಾಲು ಮತ್ತು ಹಾಲಿನ ಇತರ ಉತ್ಪನ್ನಗಳ ಸಹಿತ ಎಲ್ಲಾ ವಸ್ತುಗಳಿಗೆ ಹಾನಿಯಾಗಿದೆ. ಇದರಿಂದ 2:50 ಲಕ್ಷ ರೂ.ಗಿಂತಲೂ ಅಧಿಕ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಈ ಅವಘಡ ಸಂಭವಿಸಿರಬಹುದು ಎಂದು ಹೇಳಲಾಗಿದೆ.

- Advertisement -

Related news

error: Content is protected !!