Monday, June 30, 2025
spot_imgspot_img
spot_imgspot_img

ಮಂಗಳೂರಿನ ಕುದ್ರೋಳಿ ಮಟನ್ ಸ್ಟಾಲ್ ನಲ್ಲಿ ದನದ ಮಾಂಸ ಮಿಕ್ಸ್ ಆರೋಪ: ಕುದ್ರೋಳಿ ಕಸಾಯಿಖಾನೆಗೆ ದಿಡೀರ್ ದಾಳಿ

- Advertisement -
- Advertisement -

ಮಂಗಳೂರು: ಮಹಾ ನಗರ ಪಾಲಿಕೆ ವ್ಯಾಪ್ತಿಯ ಕಸಾಯಿ ಖಾನೆಯಲ್ಲಿ ಮಟನ್‌ ಸ್ಟಾಲ್‌ಗಳಲ್ಲಿ ದನದ ಮಾಂಸ ಬೆರಕೆ ಆರೋಪವಿರುವ ಹಿನ್ನೆಲೆಯಲ್ಲಿ ಬುಧವಾರ ಮುಂಜಾನೆ ಮಂಗಳೂರು ನಗರ ಪಾಲಿಕೆ ಮೇಯರ್‌ ದಿವಾಕರ್‌ ಪಾಂಡೇಶ್ವರ್‌ ಸೇರಿದಂತೆ ಮನಪಾ ಅಧಿಕಾರಿಗಳು ಕಸಾಯಿಖಾನೆ, ಮಾರಾಟ ಮಳಿಗೆಗಳಿಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.

ದಾಳಿ ವೇಳೆ ಕಸಾಯಿ ಖಾನೆ ಮತ್ತು ಮಾರಾಟ ಮಳಿಗೆಗಳ ಪರವಾಣಿಗೆ ಮತ್ತು ಬಿಲ್‌ಗಳನ್ನು ಮೇಯರ್‍ ಪರಿಶೀಲನೆ ನಡೆಸಿದ್ದು ಅಕ್ರಮ ಮಾರಾಟ ಮತ್ತು ವಧೆಗಳ ಬಗ್ಗೆ ನಿಗಾ ಇರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮಾಂಸ ಮಳಿಗೆಗಳಲ್ಲಿ ಮಾರಾಟವಾಗುವ ಮಾಂಸದಲ್ಲಿ ಕಡ್ಡಾಯ ಸೀಲ್ ಮತ್ತು ಬಿಲ್ ಇರುವಂತೆ ಸೂಚನೆ ನೀಡಿರುವ ಮೇಯರ್‌ ದಿವಾಕರ್‌ ಅವರು, ಅಕ್ರಮ ಮಾರಾಟ ನಡೆಸದಂತೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

- Advertisement -

Related news

error: Content is protected !!