Friday, May 17, 2024
spot_imgspot_img
spot_imgspot_img

ಮಂಗಳೂರು: ಯುವಕನಿಂದ ಸಸಿಯಾಗುವ ಮಾಸ್ಕ್ ಆವಿಷ್ಕಾರ; ಯುವಕನ ಸಂದರ್ಶನಕ್ಕೆ ಬೆನ್ನು ಬಿದ್ದಿವೆ ಅಮೇರಿಕನ್ ಮಾಧ್ಯಮಗಳು..!

- Advertisement -G L Acharya panikkar
- Advertisement -

ಮಂಗಳೂರು: ಕೊರೋನಾ‌ ಕಾಲದಲ್ಲಿ ಮಾಸ್ಕ್ ಮಹತ್ವ ಪಡೆದುಕೊಂಡಿದ್ದು, ಮಂಗಳೂರು ಹೊರ ವಲಯದ ಪಕ್ಷಿಕೆರೆಯ ನಿತಿನ್ ವಾಸ್ ಅವರ ಅವಿಷ್ಕಾರ ಈಗ ಅಮೇರಿಕಾವನ್ನೇ ಬೆರಗುಗೊಳಿಸಿದೆ. ಅಲ್ಲಿಯ ಮಾಧ್ಯಮಗಳು ಯುವಕನ ಸಂದರ್ಶನಕ್ಕೆ ಬೆನ್ನು ಬಿದ್ದಿವೆ.

ಕಳೆದ ಒಂದೂವರೆ ವರ್ಷದಲ್ಲಿ ಮಾಸ್ಕ್ ನದ್ದೆ ಸದ್ದುಗದ್ದಲ. ಮಾಸ್ಕ್ ಧರಿಸದೇ ಹೊರ ಬಂದರೆ ದಂಡ ಬೀಳುವುದು ಗ್ಯಾರಂಟಿ.ಕೊರೋನಾ‌ ನಂತರ ಮಾಸ್ಕ್ ಧರಿಸಿ ಬಿಸಾಡುವುದು ಎಲ್ಲೆಂದರಲ್ಲಿ ಕಂಡು ಬರುತ್ತಿದೆ. ಮಾಸ್ಕ್ ತ್ಯಾಜ್ಯ ಸುಂದರ ಪರಿಸರವನ್ನು ಹಾಳುಗೆಡವುತ್ತಿದೆ.ಇದರಿಂದ ಹೊರಬರಲು ಮಂಗಳೂರು ಪಕ್ಷಿಕೆರೆ ಯುವಕ ವಿಭಿನ್ನವಾಗಿ ಯೋಚಿಸಿದ್ದಾನೆ.

ಮಾಸ್ಕ್ ಬಳಕೆ ನಂತರ ಅದನ್ನು ಪರಿಸರಕ್ಕೆ ಪೂರಕವಾಗಿ ಬೆಳೆಸುವ ಉದ್ದೇಶದಿಂದ ಹೇಗೆ ಉಪಯೋಗಿಸಬಹುದು ಎನ್ನುವುದನ್ನು ಯೋಚಿಸಿ ಅದರಲ್ಲಿ ಈಗ ಯಶಸ್ವಿಯಾಗಿದ್ದಾನೆ.

ಕಾಟನ್ ಬಟ್ಟೆ ಉಪಯೋಗಿಸಿ ಕಾಟನ್ ಸೀಟ್(ಹತ್ತಿ)ನಿಂದ ಮಾಡಲಾಗುತ್ತದೆ. ಕಾಟನ್ ಬಟ್ಟೆಯ ಲೇಯರ್ ನಿಂದ ಮಾಸ್ಕ್ ರೂಪದಲ್ಲಿ ತಯಾರಿಸಿ ಅದರಲ್ಲಿ ತುಳಸಿ ಸೇರಿದಂತೆ ಹತ್ತಾರು ಔಷಧೀಯ ತರಕಾರಿ ಬೀಜ ಇಡಲಾಗುತ್ತದೆ. ಒಟ್ಟಾರೆ, ಕೊನೆಗೆ ಮಾಸ್ಕ್ ತಯಾರಾಗುತ್ತದೆ. ಹೀಗಾಗಿ ಮಾಸ್ಕ್ ಉಪಯೋಗಿಸಿ ಎಲ್ಲೆಂದರಲ್ಲಿ ಬಿಸಾಡಿದರೆ ಪರಿಸರದ ಸೌಂದರ್ಯಕ್ಕೆ ಧಕ್ಕೆ ಇಲ್ಲ. ಮಾಸ್ಕ್ ಬಿದ್ದ ಜಾಗದಲ್ಲಿ ಗಿಡ ಹುಟ್ಟಿ ಬರುತ್ತದೆ.

ಈ ಉಪಾಯದ ಮೂಲಕ ನಿತಿನ್ ಮಾಸ್ಕ್ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ಇದನ್ನು ಗಮನಿಸಿ ಅಮೆರಿಕನ್ ಬ್ರಾಡ್ ಕಾಸ್ಟಿಂಗ್ ಕಂಪನಿ (ಎಬಿಸಿ)ನಿತಿನ್ ಜೊತೆ ವರ್ಚುಯಲ್ ಸಂದರ್ಶನ ಮಾಡಿದೆ.

ಟಿವಿ ಜತೆ ವೆಬ್ ಸೈಟ್ ನಲ್ಲೂ ಪ್ರಕಟಿಸಿದೆ. ಯುನೈಟೆಡ್ ನೇಷನ್ಸ್ ಎನ್ವಿರಾನ್ಮೆಂಟ್&ಪ್ರೊಡಕ್ಷನ್ ನ ಮಾಜಿ ನಿರ್ದೇಶಕ ಸೆವಿನ್ ವಿ ವಿಟಿಡಲ್ ಟ್ವಿಟರ್ ನಲ್ಲೂ ರೀ-ಟ್ವೀಟ್ ಮಾಡಿ ಶ್ಲಾಘಿಸಿದ್ದಾರೆ.ಇದರ ಜತೆ ದಕ್ಷಿಣ ಆಫ್ರಿಕಾ ಅವರ್ ಮನಿಯಲ್ಲೂ ಸಂದರ್ಶನ ಪ್ರಸಾರವಾಗಲಿದೆ.

ನಿತಿನ್ ತಯಾರಿಸಿದ ಪರಿಸರ ಪೂರಕ ಮಾಸ್ಕ್ ಗೆ ಅಮೆರಿಕದಿಂದ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಅಮೆರಿಕನ್ ಮಾಧ್ಯಮಗಳು ಮಂಗ್ಳೂರು ಯುವಕನ ಸಂದರ್ಶನ ಹಾಗೂ ಬರಹಕ್ಕೆ ಬೆಂಬಲ ವ್ಯಕ್ತಪಡಿಸಿವೆ.

ಒಟ್ಟಾರೆ ಬುದ್ಧಿವಂತ ದಕ್ಷಿಣ ಕನ್ನಡ ಜಿಲ್ಲೆಯಕುಡ್ಲದ ಯುವಕನ ಈ ಕಿರು ಸಂಶೋಧನೆ ಮಾತ್ರ ಪರಿಸರ ಪ್ರಿಯರ ಮನಗೆದ್ದಿದೆ. ಮಾಸ್ಕ್ ಅನ್ನು ಹೀಗೂ ಬಳಸಬಹುದಲ್ಲ ಎಂಬ ಚಿಂತನೆ ಇದೀಗ ಎಲ್ಲರಲ್ಲೂ ಮೂಡುತ್ತಿದೆ.ಒಂದೇ ಗುರಿ :36 ವರ್ಷದ ನಿತಿನ್ ವಾಸ್ ಅವರ ಸಿಡ್ಕೋ ವತಿಯಿಂದ ಈ ಮಾಸ್ಕ್ ತಯಾರಿಸಲಾಗುತ್ತದೆ.

ಏಕ ವ್ಯಕ್ತಿ ಬಳಕೆಯ ಮರುಬಳಕೆಯಾಗುವ ಹತ್ತಿ ಚಿಂದಿಗಳಿಂದ ಈ ಮಾಸ್ಕ್ ತಯಾರಿಸಲಾಗುತ್ತದೆ. ಇದು ಪರಿಸರಕ್ಕೆ ಪ್ರಯೋಜನಕಾರಿಯಾಗಿ ರೂಪುಗೊಂಡಿವೆ. ಮಾಸ್ಕ್ ಉಪಯೋಗಿಸಿ ಬೀಸಾಡಿದಾಗ ಅದು ತನ್ನಷ್ಟಕ್ಕೆ ತಾನು ಸಸ್ಯವಾಗಿ ಅರಳುತ್ತದೆ.

ಈ ಹೊಸ ನವೀನ ಪರಿಸರ ಸ್ನೇಹಿ ಕಲ್ಪನೆ ಸಾರ್ವಜನಿಕರು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. 2017 ರಿಂದ ತಮ್ಮ ಉದ್ಯಮದಲ್ಲಿ ಮರುಬಳಕೆಯ ಮತ್ತು ಸಸ್ಯ ಬೀಜ ಸರಕುಗಳ ಮೂಲಕ ಇಂಥ ಚಟುವಟಿಕೆ ನಡೆಸುತ್ತಿದ್ದಾರೆ.

ಕೊರೋನಾ ಸಾಂಕ್ರಮಿಕ ರೋಗ ಬಂದಾಗ ಮಾಸ್ಕ್ ತಯಾರಿಸಲು ಆರಂಭಿಸಿದರು. ಪ್ರತಿಯೊಂದು ಮಾಸ್ಕ್ ಕೈಯಿಂದ ತಯಾರಿಸಲ್ಪಟ್ಟಿದೆ. ಹೊರಗಿನ ಪದರ ಸಸ್ಯ ಅಥವಾ ತರಕಾರಿಗಳ ಬೀಜಗಳಿಂದ ಒಳಗೊಂಡಿದೆ. ಮಾಸ್ಕ್ ಬಳಸಿದ ನಂತರ ಅವುಗಳನ್ನು ಎಸೆಯಬೇಕು. ಸ್ವಲ್ಪ ನೀರು ಹಾಕಿದರೆ ಉತ್ತಮ. ಕೆಲವೇ ದಿನಗಳಲ್ಲಿ ಅದು ಅತ್ಯುತ್ತಮ ಸಸ್ಯವಾಗಿ ತನ್ನಷ್ಟಕ್ಕೆ ತಾನು ಸಸಿ ಮರವಾಗಿ ಬೆಳೆಯುತ್ತದೆ.

ಪ್ರತಿಯೊಂದು ಮಾಸ್ಕ್ ಗೆ ರೂ.25 .ಇದರ ತಯಾರಿಕೆ ಅಷ್ಟೊಂದು ಸುಲಭ ಸಾಧ್ಯವಲ್ಲ. ಪ್ರಯಾಸಕರ ಪ್ರಕ್ರಿಯೆ. ಕೈಯಿಂದಲೇ ತಯಾರಿಸುವುದರಿಂದ ಇದಕ್ಕೆ ಕೆಲಸವು ಹೆಚ್ಚು.ಪರಿಸರ ಸ್ನೇಹಿಯಾಗಿರುವುದರಿಂದ ಜನ ಇದರತ್ತ ಚಿತ್ತ ಹರಿಸಿದ್ದಾರೆ.

ಸಾಕಷ್ಟು ಶ್ರಮ ವಹಿಸಬೇಕಾಗುತ್ತದೆ. ಹತ್ತಿಯಿಂದ ತಯಾರಿಸಬಹುದಾದ್ದರಿಂದ ಇದನ್ನು ಒಣಗಲು ಕನಿಷ್ಠ 12 ಗಂಟೆ ಒಣಗಿಸಿ ಇಡಬೇಕಾಗುತ್ತದೆ.

ಕೊರೋನಾ ಸಾಂಕ್ರಾಮಿಕ ರೋಗ ಹರಡುವ ಮೊದಲು ಸಂಸ್ಥೆ ಸುಮಾರು ಮುನ್ನೂರು ಜನರನ್ನು ವಿವಿಧ ಉತ್ಪನ್ನಗಳಲ್ಲಿ ತೊಡಗಿಸಿಕೊಂಡಿತ್ತು. ಈಗ ಅಷ್ಟು ಇಲ್ಲ. ಆದರೆ, ಇವರ ಈ ಅಪರೂಪದ ಪರಿಸರ ಪ್ರಿಯ ಮಾಸ್ಕ್ ಮಾತ್ರ ಕುಡ್ಲದಲ್ಲಿ ಜನರಿಗೆ ಮೆಚ್ಚುಗೆ ಆಗುತ್ತಿದೆ.

- Advertisement -

Related news

error: Content is protected !!