Saturday, June 28, 2025
spot_imgspot_img
spot_imgspot_img

ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿ ಜೊತೆ ಅಸಭ್ಯವಾಗಿ ವರ್ತನೆ; ಪೊಲೀಸ್ ಸಿಬ್ಬಂದಿ ಅರೆಸ್ಟ್!

- Advertisement -
- Advertisement -

ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿ ಜೊತೆ ಕಂಕನಾಡಿ ನಗರ ಠಾಣೆಯ ಸಿಬ್ಬಂದಿಯೋರ್ವ ಮೊಬೈಲ್ ಫೋನ್ ಮೂಲಕ ಅಸಭ್ಯವಾಗಿ ವರ್ತಿಸಿದ ಘಟನೆಗೆ ಸಂಬಂಧಪಟ್ಟಂತೆ ಆರೋಪಿಯನ್ನು ಬಂಧಿಸಲಾಗಿದೆ.

ಕಂಕನಾಡಿ ನಗರ ಠಾಣೆಯ ಹೆಡ್‌ಕಾನ್‌ಸ್ಟೆಬಲ್ ವಿನೋದ್ ಬಂಧಿತ ಆರೋಪಿಯಾಗಿದ್ದಾನೆ.

ಅಪ್ರಾಪ್ತ ಬಾಲಕಿಯು ‘ನಗರದ ಪೊಲೀಸ್ ಠಾಣೆಗೆ ಆಟೋರಿಕ್ಷಾ ಚಾಲಕ ತನಗೆ ಕಿರುಕುಳ ನೀಡಿದ ಪ್ರಕರಣವೊಂದಕ್ಕೆ ಸಂಬಂಧಿಸಿ ಜನವರಿ ತಿಂಗಳಿನಲ್ಲಿ ಪೋಷಕರ ಜತೆ ಕಂಕನಾಡಿ ನಗರ ಠಾಣೆಗೆ ತಂದೆಯ ಜೊತೆ ದೂರು ನೀಡಲು ಬಂದಿದ್ದಳು.

ಈ ತನಿಖೆ ವೇಳೆಯಲ್ಲಿ ಬಾಲಕಿಯಿಂದ ಮೊಬೈಲ್ ನಂಬರ್ ಅನ್ನು ಪಡೆದ ಠಾಣೆಯ ಹೆಡ್‌ಕಾನ್‌ಸ್ಟೈಬಲ್ ದರ್ಜೆಯ ಸಿಬ್ಬಂದಿ ಆಕೆಗೆ ಮೆಸೇಜ್ ಮಾಡಿ ‘ನೀನು ಎಲ್ಲಿದ್ದೀಯಾ, ಮನೆಯಲ್ಲಿ ಒಬ್ಬನೇ ಇದೀನಿ, ನಿನ್ನ ಮನೆಯ ಹತ್ತಿರ ರೌಂಡ್ ಬಂದಾಗ ಸಿಗುತ್ತೇನೆ ಎಂದು ಅಸಭ್ಯವಾಗಿ ನಡೆದುಕೊಂಡಿದ್ದಾನೆ.

ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಮಂಗಳೂರು ಕಮಿಷನರ್ ಎನ್.ಶಶಿಕುಮಾರ್ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಸಂದರ್ಭ ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿ ಹರಿರಾಂ ಶಂಕರ್ ಉಪಸ್ಥಿತರಿದ್ದರು.

- Advertisement -

Related news

error: Content is protected !!