Sunday, June 14, 2026
spot_imgspot_img
spot_imgspot_img

ಮಂಗಳೂರು: ಖಾಸಗಿ ಬಸ್‌ನ ಪುಟ್ ಬೋರ್ಡ್ ಪ್ರಯಾಣ; 123 ಪ್ರಕರಣ ದಾಖಲು

- Advertisement -
- Advertisement -

ಮಂಗಳೂರು: ಖಾಸಗಿ ಬಸ್ ನ ಪುಟ್ ಬೋರ್ಡ್ ಮೇಲೆ ನಿಂತು ಕಂಡಕ್ಟರ್ ಒಬ್ಬರ ಸಾವನಪ್ಪಿದ ಬೆನ್ನಲ್ಲೆ ಇದೀಗ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು, ಫುಟ್‌ಬೋರ್ಡ್ ಪ್ರಯಾಣಕ್ಕೆ ಸಂಬಂಧಿಸಿದಂತೆ 123 ಪ್ರಕರಣಗಳನ್ನು ದಾಖಲಿಸಿದ್ದಾರೆ.

ಖಾಸಗಿ ಬಸ್ ಕಂಡಕ್ಟರ್ ಸಾವಿಗೀಡಾದ ಬಳಿಕ ಮಂಗಳೂರು ಪೊಲೀಸರು ಎಚ್ಚೆತ್ತುಕೊಂಡು ಬಸ್ ಗಳಿಗೆ ಬಾಗಿಲು ಕಡ್ಡಾಯಗೊಳಿಸಿದ್ದಾರೆ. ಈ ನಡುವೆ ಕಾರ್ಯಾಚರಣೆ ಮುಂದುವರೆಸಲಾಗಿದ್ದು, ಫುಟ್‌ಬೋರ್ಡ್‌ನಲ್ಲಿ ನಿಂತವರ ವಿರುದ್ಧ ಕ್ರಮಕೈಗೊಂಡಿದ್ದಾರೆ. ಅಲ್ಲದೆ, ಇನ್ನು ಮುಂದಕ್ಕೆ ನಿಂತಿರುವುದು ಕಂಡುಬಂದರೆ ಬಸ್ ಮುಂದಕ್ಕೆ ಕೊಂಡೊಯ್ಯಬಾರದೆಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಬಾಗಿಲು ಹೊಂದಿರುವ ಬಸ್‌ಗಳು ಇನ್ನೂ ಕಟ್ಟುನಿಟ್ಟಾಗಿ ನಿಯಮ ಪಾಲಿಸಬೇಕು. ಹಾಗೂ ಬಾಗಿಲನ್ನು ಸಂಚಾರದ ಸಮಯದಲ್ಲಿ ಮುಚ್ಚಿರಬೇಕೆಂದು ಎಂದು ಪೊಲೀಸರು ತಿಳಿಸಿದ್ದಾರೆ. ಫುಟ್ ಬೋರ್ಡ್ ನಲ್ಲಿ ಯಾರಾದರು ನಿಂತಿದ್ದರೆ, ಹಾಗೂ ಬಾಗಿಲು ಮುಚ್ಚದೇ ಇದ್ದಲ್ಲಿ ಬಸ್ ಸಂಚರಿಸಬಾರದೆಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.

- Advertisement -

Related news

error: Content is protected !!