Thursday, May 2, 2024
spot_imgspot_img
spot_imgspot_img

1.7 ಕೋಟಿ ವೆಚ್ಚದಲ್ಲಿ ನೂತನವಾಗಿ ಮಂಗಳೂರು ರಥ ನಿರ್ಮಾಣ

- Advertisement -G L Acharya panikkar
- Advertisement -

ಮಂಗಳೂರು: ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಇತಿಹಾಸ ಪ್ರಸಿದ್ಧ ಮಂಗಳೂರು ರಥಕ್ಕೆ 200 ವರ್ಷ ಆಗಿದ್ದು , ಇದೀಗ ನೂತನವಾಗಿ ಬ್ರಹ್ಮರಥ ನಿರ್ಮಾಣವಾಗಲಿರುವುದು .

ಸುಮಾರು 1.7 ಕೋಟಿ ವೆಚ್ಚದಲ್ಲಿ ನೂತನವಾಗಿ ಕಾಷ್ಠ ಶಿಲ್ಪದ ಬ್ರಹ್ಮ ರಥವು ಕೋಟೇಶ್ವರದಲ್ಲಿರುವ ಶ್ರೀ ವಿಶ್ವಕರ್ಮ ಕರಕುಶಲ ಶಿಲ್ಪ ಕಲಾ ಶಾಲೆ ಯಲ್ಲಿ  ನಿರ್ಮಾಣ ಪ್ರಾರಂಭವಾಗಿದ್ದು ಅಕ್ಷಯ ತೃತೀಯದ ಪುಣ್ಯ ದಿನದಂದು ಕಾಷ್ಠ ರಥದ ಹೊಸ ಮರದ ಮುಹೂರ್ತ ಪೂಜೆ ನೆರವೇರಿತು.

ಮುಂದಿನ ವರ್ಷ ಜರಗ ಲಿರುವ ಮಂಗಳೂರು ರಥೋತ್ಸವಕ್ಕೆ ನೂತನ ರಥ ನಿರ್ಮಾಣ ಪೂರ್ಣಗೊಂಡು ಶ್ರೀ ದೇವರಿಗೆ ಸಮರ್ಪಣೆ ಗೊಳ್ಳಲಿರುವುದು . ಶ್ರೀ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಆದೇಶ ಪ್ರಕಾರ ರಥ ನಿರ್ಮಾಣ ಕಾರ್ಯ ಪ್ರಾರಂಭಗೊಂಡಿದ್ದು , ಶ್ರೀ ಗಳವರ ದಿವ್ಯ ಉಪಸ್ಥಿತಿಯಲ್ಲಿ ರಥ ಸಮರ್ಪಣೆ ಗೊಳ್ಳಲಿರುವುದು .

ಈ ಸಂದರ್ಭದಲ್ಲಿ ಶ್ರೀ ದೇವಳದ ಮೊಕ್ತೇಸರರಾದ ಸಿ . ಎಲ್ ಶೆಣೈ , ಕೆ ಪಿ ಪ್ರಶಾಂತ್ ರಾವ್ , ರಾಮಚಂದ್ರ ಕಾಮತ್ , ದೇವಳದ ತಂತ್ರಿಗಳಾದ ಕಾಶೀನಾಥ್ ಆಚಾರ್ಯ , ಲೆಕ್ಕ ಪರಿಶೋಧಕ ಎಂ . ಜಗನ್ನಾಥ್ ಕಾಮತ್ , ಡಿ ವಾಸುದೇವ್ ಕಾಮತ್ , ಜೀವನ್ ರಾಜ್ ಶೆಣೈ , ರಥಶಿಲ್ಪಿಗಳಾದ ಲಕ್ಷ್ಮಿ ನಾರಾಯಣ ಆಚಾರ್ಯ ಮತ್ತು ಅವರ ಪುತ್ರ ರಾಜಗೋಪಾಲ ಆಚಾರ್ಯ ಅವರ ನೇತ್ರತ್ವದಲ್ಲಿ ನಿರ್ಮಾಣಗೊಳ್ಳಲಿರುವುದು . 

- Advertisement -

Related news

error: Content is protected !!