Sunday, May 19, 2024
spot_imgspot_img
spot_imgspot_img

ಮಂಗಳೂರು: ಅನ್ಯಕೋಮಿನ‌ ವಿವಾಹಿತ ಯುವಕ ಮೈಸೂರು ಮೂಲದ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಎಸಗಿ, ವಂಚಿಸಿದ ಪ್ರಕರಣ: ಆರೋಪಿಯ ಬಂಧನ

- Advertisement -G L Acharya panikkar
- Advertisement -

ಮಂಗಳೂರು: ಅನ್ಯಕೋಮಿನ ವಿವಾಹಿತ ಯುವಕನೋರ್ವನು ಮಂಗಳೂರು ನಗರದಲ್ಲಿ ವ್ಯಾಸಂಗ ಮಾಡುತ್ತಿದ್ದ ಮೈಸೂರು ಮೂಲದ ವಿದ್ಯಾರ್ಥಿನಿಯನ್ನು ಮದುವೆಯಾಗುವೆನೆಂದು ನಂಬಿಸಿ ಲೈಂಗಿಕವಾಗಿ ದುರ್ಬಳಕೆ ಮಾಡಿ ಲಕ್ಷಾಂತರ ರೂ. ವಂಚನೆ ಮಾಡಿರುವುದಾಗಿ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ನಿನ್ನೆ ದೂರು ದಾಖಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಮಂಗಳೂರು ಪೊಲೀಸರು ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ‌.

21 ವರ್ಷದ ಸಂತ್ರಸ್ತ ವಿದ್ಯಾರ್ಥಿನಿಗೆ ಮಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ 35 ವರ್ಷದ ಅನ್ಯಕೋಮಿನ ಆರೋಪಿಯ ಪರಿಚಯವಾಗಿದೆ‌‌. ಆಕೆಯೊಂದಿಗೆ ಸಲಿಗೆ ಬೆಳೆಸಿಕೊಂಡ ಆರೋಪಿ ಆಕೆಯನ್ನು ಮದುವೆಯಾಗುವೆನೆಂದು ಹೇಳಿ ದೈಹಿಕ ಸಂಪರ್ಕವನ್ನು ಮಾಡಿದ್ದಾನೆ. ಬಳಿಕ ಆತನಿಗೆ ವಿವಾಹವಾಗಿರುವುದು ತಿಳಿದ ಬಳಿಕ‌ ವಿದ್ಯಾರ್ಥಿನಿ ಆತನಿಂದ ದೂರ ಇರಲು ಪ್ರಯತ್ನಿಸಿದಾಗ, ಆತ ತಾನು ತನ್ನ ಹೆಂಡತಿಗೆ ತಲಾಖ್ ನೀಡಿ ನಿನ್ನೊಂದಿಗೆ ದಾಂಪತ್ಯ ಜೀವನ ನಡೆಸುವೆನೆಂದು ನಂಬಿಸಿದ್ದಾನೆ. ಈ ನಡುವೆ ಆರೋಪಿ ತನ್ನಿಂದ ಸುಮಾರು 35 ಲಕ್ಷ ರೂ. ಪಡೆದು ಬೆಂಗಳೂರು ಮತ್ತಿತರೆಡೆ ಕೆಫೆ ಆರಂಭಿಸಿದ್ದಾನೆಂದು ದೂರಿನಲ್ಲಿ ವಿದ್ಯಾರ್ಥಿನಿ ತಿಳಿಸಿದ್ದಾಳೆ.

ಈ ನಡುವೆ ಆತ ತನ್ನ ಕೈಗೆ ಸಿಗದೆ ತಪ್ಪಿಸಿಕೊಳ್ಳುತ್ತಿರುವುದನ್ನು ಗಮನಿಸಿ ವಿದ್ಯಾರ್ಥಿನಿ ಸೆ.21ರಂದು ಆರೋಪಿಯನ್ನು ಹುಡುಕಿಕೊಂಡು ಕೊಣಾಜೆಯಲ್ಲಿರುವ ಆತನ ಮನೆಗೆ ಹೋಗಿದ್ದಾಳೆ. ಮನೆಯಲ್ಲಿ ಆತನ ಪೋಷಕರು ಸೇರಿ ಸಹೋದರಿಯರು ಇದ್ದು, ಅವರಲ್ಲಿ ಆತ ಬರುವವರೆಗೆ ಇಲ್ಲೇ ಇರುವೆನೆಂದು ಹೇಳಿದ್ದಾಳೆ. ಆಗ ಅವರಲ್ಲೊಬ್ಬರು ಈಕೆಯ ಮೇಲೆ ಹಲ್ಲೆ ನಡೆಸಿ ಮನೆಯಿಂದ ಹೊರಗೆ ಹಾಕಿದ್ದಾರೆ‌. ಆಕೆ ಮರಳಿ ಮೈಸೂರಿಗೆ ಹೋಗಲೆಂದು ಬಸ್ ನಿಲ್ದಾಣಕ್ಕೆ ಹೋಗಿ ಅಲ್ಲಿ ಅಳುತ್ತಿರುವಾಗ, ಸಾರ್ವಜನಿಕರು ನೋಡಿ 112 ಗೆ ಕರೆ ಮಾಡಿ ತಿಳಿಸಿದ್ದಾರೆ.

ತಕ್ಷಣ ಕೊಣಾಜೆ ಪೊಲೀಸರು ಆಗಮಿಸಿ ಆಕೆಯನ್ನು ಸಂತೈಸಿ ಠಾಣೆಗೆ ಕರೆದೊಯ್ದಿದ್ದಾರೆ‌‌. ಅಲ್ಲಿ ಆಕೆಗೆ ಸಾಂತ್ವನಪಡಿಸಿ, ಊಟ ಉಪಚಾರ ಮಾಡಿ, ಆಕೆಯನ್ನು ವಿಚಾರಣೆ ನಡೆಸಿದ್ದಾರೆ. ಆಗ ಆಕೆ ಆರೋಪಿಯಿಂದ ನಡೆದ ಲೈಂಗಿಕ ದೌರ್ಜನ್ಯ ಹಾಗೂ ವಂಚನೆ ಬಗ್ಗೆ ತಿಳಿಸಿದ್ದಾಳೆ. ಈ ಸಂದರ್ಭ ಆಕೆ ತನ್ನ ವಕೀಲರ ಮೂಲಕ ಮೈಸೂರಿನಲ್ಲಿಯೇ ಈ ಬಗ್ಗೆ ದೂರು ದಾಖಲಿಸುವುದಾಗಿ ತಿಳಿಸಿದ್ದಾಳೆ. ಅದರಂತೆ ಪೊಲೀಸರೇ ತಮ್ಮ ವಾಹನದಲ್ಲಿ ಆಕೆಯನ್ನು ಬಸ್ ನಿಲ್ದಾಣದವರೆಗೆ ಕರೆದೊಯ್ದು ಬಸ್ ಟಿಕೆಟ್ ತೆಗೆದುಕೊಟ್ಟು ಮೈಸೂರಿಗೆ ಕಳುಹಿಸಿ ಕೊಟ್ಟಿದ್ದಾರೆ.

ಈ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಎನ್‌. ಮಾತನಾಡಿ, ಸಂತ್ರಸ್ತ ವಿದ್ಯಾರ್ಥಿನಿ ನಿನ್ನೆ ಮತ್ತೆ ತಮ್ಮ ವಕೀಲರೊಂದಿಗೆ ಆಗಮಿಸಿ ಮಂಗಳೂರಿನಲ್ಲಿಯೇ ಆರೋಪಿಯ ದೌರ್ಜನ್ಯ ಹಾಗೂ ವಂಚನೆ ಬಗ್ಗೆ ದೂರು ದಾಖಲಿಸುವುದಾಗಿ ತಿಳಿಸಿದ್ದಾಳೆ. ಆದ್ದರಿಂದ ಪಾಂಡೇಶ್ವರದಲ್ಲಿರುವ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಆರೋಪಿಯ ಪತ್ತೆಗೆ ಕ್ರಮ ಕೈಗೊಳ್ಳಲಾಗಿದ್ದು, ಬೆಂಗಳೂರಿನಲ್ಲಿ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

driving
- Advertisement -

Related news

error: Content is protected !!