Thursday, June 24, 2021
spot_imgspot_img
spot_imgspot_img

ಮಂಗಳೂರು: ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ ಜೀವ ಬೆದರಿಕೆ!

- Advertisement -
- Advertisement -

ಮಂಗಳೂರು: ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಅವರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿದ್ದು, ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶರಣ್ ಪಂಪ್ ವೆಲ್ ಅವರು ಇತ್ತೀಚೆಗೆ ಹಿಂದೂಗಳ ಅಂತ್ಯಸಂಸ್ಕಾರವನ್ನು ಅನ್ಯಧರ್ಮದವರು ಮಾಡುವ ಅವಶ್ಯಕತೆ ಇಲ್ಲ. ಕರಾವಳಿಯಲ್ಲಿ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ಮಾಡುವ ಹಿಂದೂ ಕಾರ್ಯಕರ್ತರ ಪಡೆ ಇದೆ ಎಂದು ಪ್ರಕಟಣೆ ನೀಡಿದ್ದರು. ಈ ಹೇಳಿಕೆಯ ಬಳಿಕ ಶರಣ್ ಪಂಪ್ ವೆಲ್ ಅವರ ಮೊಬೈಲ್ ನಂಬರ್ ನೀಡಿ ಸಾಕಷ್ಟು ಟ್ರೋಲ್ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಶರಣ್ ಅವರ ಹೇಳಿಕೆಗೂ ಪರ ವಿರೋಧ ಚರ್ಚೆಗಳು ಆರಂಭವಾಗಿದ್ದವು.

ಈ ಹೇಳಿಕೆ ಬಳಿಕ ಶರಣ್ ಪಂಪ್ ವೆಲ್ ಅವರಿಗೆ ವಿದೇಶದಿಂದ ಸ್ಯಾಟಲೈಟ್ ಪೋನ್ ಕರೆ ಮೂಲಕ ಜೀವ ಬೆದರಿಕೆ ಕರೆಗಳು ಬರಲಾರಂಭಿಸಿದೆ. ಬೆದರಿಕೆ ಕರೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುವ ಬಗ್ಗೆ ಶರಣ್ ಪಂಪ್ ವೆಲ್ ಅವರು ಕದ್ರಿ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

- Advertisement -
- Advertisement -

MOST POPULAR

HOT NEWS

Related news

error: Content is protected !!