- Advertisement -
- Advertisement -




ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎಎಸ್‌ಐ ಸೇರಿದಂತೆ ಪೊಲೀಸ್ ಇಲಾಖೆಗೆ ಸಂಬಂಧಪಟ್ಟ ಸುಮಾರು 198 ಸಿಬ್ಬಂದಿಗಳಿಗೆ, ಜಿಲ್ಲಾ ಪೊಲೀಸ್ ಇಲಾಖೆ ವರ್ಗಾವಣೆ ಆದೇಶ ಪಟ್ಟಿ ಬಿಡುಗಡೆಗೊಳಿಸಿದೆ. ಈ ಬಗ್ಗೆ ಇಂದು ಜಿಲ್ಲಾ ಪೊಲೀಸ್ ಕಚೇರಿಯ ಮಿನಿ ಹಾಲ್‌ನಲ್ಲಿ ಸಮಾಲೋಚನೆ (ಕೌನ್ಸಿಲಿಂಗ್) ನಡೆಯಲಿದೆ.
ಸಮಾಲೋಚನೆಗೆ ಲಗತ್ತಿಸಿರುವ ಆದೇಶ ಪಟ್ಟಿಯಲ್ಲಿ ಸೂಚಿಸಿರುವ ಇಲ್ಲಾ ಎಎಸ್‌ಐ, ಸಿಹೆಚ್‌ಸಿ, ಸಿಪಿಸಿ ಸಿಬ್ಬಂದಿಗಳಿಗೆ ಕೌನ್ಸಿಲಿಂಗ್‌ನಲ್ಲಿ ಕಡ್ಡಾಯವಾಗಿ ಭಾಹವಹಿಸುವಂತೆ ಸೂಚಿಸಲಾಗಿದೆ. ಒಂದು ವೇಳೆ ಸಿಬ್ಬಂದಿಗಳು ತರಬೇತಿ ಅಥವಾ ವೈದ್ಯಕೀಯ ರಜೆ ಮೇಲೆ ತೆರಳಿದ್ದಲ್ಲಿ ಅವರುಗಳಿಂದ ಮೂರು ಠಾಣೆಗಳ ಇಚ್ಚಾಪತ್ರಗಳನ್ನು ಪಡೆದು ಸಲ್ಲಿಸುವುದು. ಇದರ ಹೊರತಾಗಿ ಸಮಾಲೋಚನೆಗೆ ಹಾಜರಾಗದೇ ಇದ್ದಲ್ಲಿ ಏಕಪಕ್ಷೀಯವಾಗಿ ಠಾಣೆಗಳ ಹಂಚಿಕೆ ಮಾಡಲಾಗುತ್ತದೆ.




- Advertisement -