Friday, May 17, 2024
spot_imgspot_img
spot_imgspot_img

ಮಂಗಳೂರು/ಉಡುಪಿ: ಏರುತ್ತಿರುವ ಬಿಸಿಲಿಗೆ ಮೊಟ್ಟೆ ಬೆಲೆ ಇಳಿಕೆ..!

- Advertisement -G L Acharya panikkar
- Advertisement -

ಮಂಗಳೂರು/ಉಡುಪಿ: ಬೇಸಿಗೆಯ ಬಿಸಿ ಹೆಚ್ಚಾಗುತ್ತಿದ್ದಂತೆ ಮೊಟ್ಟೆಯ ಬೆಲೆಯಲ್ಲಿ ಇಳಿಕೆಯಾಗಿದೆ. 6.50ರ ಆಸುಪಾಸಿನಲ್ಲಿದ್ದ ಮೊಟ್ಟೆಯ ಬೆಲೆ ಮಂಗಳೂರು ಮತ್ತು ಉಡುಪಿಯಲ್ಲಿ 5.50 ರೂ.ಗೆ ಇಳಿದಿದೆ. ಹೆಚ್ಚು ದಾಸ್ತಾನು ಇರುವ ಅಂಗಡಿಗಳು 10 ಮೊಟ್ಟೆಗಳನ್ನು 52 ರೂ.ಗೆ ಮಾರಾಟ ಮಾಡುತ್ತಿವೆ.

ಮೊಟ್ಟೆಯ ಸಗಟು ದರ 4.80 ರಿಂದ 4.90 ರೂ.ಗೆ ತಲುಪಿದೆ. ಕೆಲ ದಿನಗಳ ಹಿಂದೆ 5.20 ರೂ.ಗೆ ತಲುಪಿದ್ದರೂ ಈಗ ಮತ್ತೆ ಬೆಲೆ ಕುಸಿದಿದೆ.

ಬೇಸಿಗೆಯ ತೀವ್ರತೆಯಿಂದಾಗಿ ಮೊಟ್ಟೆಯನ್ನು ಹೆಚ್ಚು ದಿನ ದಾಸ್ತಾನು ಇಡಲು ಸಾಧ್ಯವಾಗದ ಕಾರಣ ಬೆಲೆ ಇಳಿಕೆಯಾಗಿದೆ ಎನ್ನಲಾಗಿದೆ. ಜತೆಗೆ ಹೆಚ್ಚಿನ ಪ್ರಮಾಣದಲ್ಲಿ ಮೊಟ್ಟೆ ಸೇವಿಸುತ್ತಿದ್ದ ಅಂಗನವಾಡಿ ಆಟದ ಶಾಲೆಗಳು ಬೇಸಿಗೆ ರಜೆಗೆ ಬಂದ್ ಆಗಿವೆ. ಇದಲ್ಲದೆ, ಬೇಸಿಗೆಯಲ್ಲಿ ಮೊಟ್ಟೆಗಳು ಶಾಖವನ್ನು ಉಂಟುಮಾಡುತ್ತವೆ ಎಂಬ ಭಾವನೆ ಸಾರ್ವಜನಿಕರಲ್ಲಿದೆ, ಆದ್ದರಿಂದ ಮೊಟ್ಟೆಗಳನ್ನು ತಿನ್ನುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಬೇಸಿಗೆಯ ಮಳೆಗೆ ಭೂಮಿ ತಂಪೆರೆದರೆ ಮತ್ತೆ ದರ ಏರಿಕೆಯಾಗಲಿದೆ ಎನ್ನುತ್ತಾರೆ ವ್ಯಾಪಾರಿಗಳು.

- Advertisement -

Related news

error: Content is protected !!