Saturday, June 27, 2026
spot_imgspot_img
spot_imgspot_img

ಮಂಗಳೂರು: ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಸಾವು!

- Advertisement -
- Advertisement -

ಮಂಗಳೂರು: ಮಹಿಳೆಯೋರ್ವರು ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಪರಿಣಾಮವಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.

ವಾಮಂಜೂರು ನಿವಾಸಿ ವಿನೋದ್ ರಾಜ್ ಅಮೀನ್ ಎಂಬವರ ಪತ್ನಿ ಪ್ರಿಯಾಂಕ (31) ಮೃತಪಟ್ಟವರು.

ಜು.10ರ ಶನಿವಾರ ಯೆಯ್ಯಾಡಿ ಹರಿಪದವು ಎಂಬಲ್ಲಿ ಪ್ರಿಯಾಂಕ ಅವರು ದ್ವಿಚಕ್ರ ವಾಹನದಲ್ಲಿ ತೆರಳುತ್ತಿರುವ ವೇಳೆ ವಿರುದ್ಧ ದಿಕ್ಕಿನಲ್ಲಿ ಬಂದ ಆಲ್ಟೊ ಕಾರು ಡಿಕ್ಕಿಯಾಗಿ, ಪ್ರಿಯಾಂಕ ಅವರ ತಲೆಗೆ ಗಂಭೀರವಾದ ಗಾಯಗಳಾಗಿತ್ತು. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಪಘಾತದ ಬಳಿಕ ಕೋಮಾದಲ್ಲಿದ್ದ ಪ್ರಿಯಾಂಕ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈ ಅಪಘಾತದ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!