Friday, March 29, 2024
spot_imgspot_img
spot_imgspot_img

ಮಂಗಳೂರು: ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳ ಬಲೆಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಸರ್ವೇಯರ್ !

- Advertisement -G L Acharya panikkar
- Advertisement -

ಮಂಗಳೂರು: ಮಂಗಳೂರಿನ ಜನರನ್ನು ಬಹಳ ಸಮಯದಿಂದ ಲಂಚದ ಹಣಕ್ಕಾಗಿ ಪೀಡಿಸುತ್ತಿದ್ದ ಮಂಗಳೂರು ನಗರ ಸರ್ವೇಯರ್ ( ಮಂಗಳೂರು ತಾಲೂಕಿನ ಪ್ರಭಾರ) ಗಂಗಾಧರ ಎಂ. ಮಂಗಳೂರಿನ ಭ್ರಷ್ಟಾಚಾರ ನಿಗ್ರಹ ದಳ- ಎಸಿಬಿ ಯ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.

ಮಂಗಳೂರಿನ ನಗರದಲ್ಲಿ ನಾಗರೀಕರೋರ್ವರು ತಮ್ಮ ಕಛೇರಿಯ ಪೀಠೋಪಕರಣ ಮಾಡಿಸಲು ತಮ್ಮ ಮನೆಯ ಆವರಣದಲ್ಲಿ ಇದ್ದ ಸಾಗುವಾನಿ ಮರವನ್ನು ಕಡಿಯಲು ಅರಣ್ಯ ಇಲಾಖೆಗೆ ಸಿಂಗಲ್ ಪರ್ಮಿಟ್ ಅನುಮತಿಗಾಗಿ ಕೋರಿಕೆ ಪತ್ರ ಸಲ್ಲಿಸಿದ್ದರು, ಮಂಗಳೂರು ನಗರದ ಅರಣ್ಯ ಇಲಾಖೆ ಈ ಪತ್ರವನ್ನು ಕಂದಾಯ ಇಲಾಖೆಗೆ ಕಳಿಸಿತ್ತು.

ಆದರೆ, ಬರೋಬ್ಬರಿ ಒಂದು ತಿಂಗಳು ಕಳೆದರೂ ಸರ್ವೇಯರ್ ಗಂಗಾಧರ್ ಸ್ಥಳ ಪರಿಶೀಲನೆಗೆ ಬರಲೇ ಇಲ್ಲ. ಮತ್ತೆ ಸಂಪರ್ಕಿಸಿದಾಗ, ಅವರು ಈ ಕಾರ್ಯಕ್ಕೆ ಕನಿಷ್ಟ 3000 ರೂ. ಲಂಚ ನೀಡಬೇಕೆಂಬ ಬೇಡಿಕೆ ಇಟ್ಟರು.

ಈ ಪರ್ಮಿಟ್ ಗಾಗಿ ಕಂದಾಯ ಇಲಾಖೆಗೆ ಕಟ್ಟಬೇಕಾದ 600 ರೂಪಾಯಿ ಜೊತೆಯಲ್ಲಿ ಈತನಿಗೆ 3000 ರೂಪಾಯಿ ಕೊಟ್ಟ ಉದ್ಯಮಿಗೆ ಇನ್ನೊಂದು ತಿಂಗಳು ಕಳೆದರೂ ಮರ ಇರುವ ಸ್ಥಳದ ನಕಾಶೆ ನೀಡಲು ಪುನಃ 30,000-00 ಡಿಮಾಂಡ್ ಇಟ್ಟಿದ್ದರು, ಇದರಿಂದ ರೋಸಿ ಹೋದ ಸಂಬಂಧಪಟ್ಟ ನಾಗರಿಕರು ಕೊನೆಗೆ ಮಂಗಳೂರಿನ ಎನ್.ಇ.ಸಿ.ಎಫ್ ಸಂಘಟನೆಯ ಗಮನಕ್ಕೆ ತಂದರು. ನಂತರ ಈ ವಿಚಾರವನ್ನು ಮಂಗಳೂರಿನ ಎಸಿಬಿ ಇನ್ಸ್ಪೆಕ್ಟರ್ ಶ್ಯಾಮಸುಂದರ್ ಅವರ ಗಮನಕ್ಕೆ ತರಲಾಯಿತು.

ಸುಮಾರು ಮೂರು ದಿನಗಳ ಮುಂಜಾಗ್ರತಾ ಕಾರ್ಯಾಚರಣೆ ಮಾಡಿ ಮಂಗಳೂರಿನ ಮಿನಿ ವಿಧಾನ ಸೌಧದ ಎದುರು ಚೌಕಾಶಿ ಮಾಡಿ ಮಾಡಿ ಕೊನೆಗೆ 20,000-00 ರೂಪಾಯಿ ಲಂಚದ ಹಣ ತೆಗೆದು ಕೊಳ್ಳುವ ಸಮಯದಲ್ಲಿ ಸಾಕ್ಷಿ ಸಮೇತ ಸರ್ವೇಯರ್ ಗಂಗಾಧರ್ ಎಂಬ ಮಹಾ ಭ್ರಷ್ಟ ಅಧಿಕಾರಿಯನ್ನು ಎಸಿಬಿ ತಂಡ ಬಂಧಿಸಿದೆ.

ಈ ಕಾರ್ಯಾಚರಣೆಯಲ್ಲಿ ಎಸಿಬಿ ಡಿವೈಎಸ್‌ಪಿ ಪ್ರಕಾಶ್, ಇನ್ಸ್ ಪೆಕ್ಟರ್ ಗಳಾದ ಶ್ಯಾಮಸುಂದರ್ ಮತ್ತು ಗುರುರಾಜ್, ಸಿಬ್ಬಂದಿಗಳಾದ- ಹರಿಪ್ರಸಾದ್, ರಾಧಾಕೃಷ್ಣ ಕೆ, ಗಂಗಣ್ಣ, ರಾಧಾಕೃಷ್ಣ, ಉಮೇಶ್, ಆದರ್ಶ, ರಾಕೇಶ್, ರಾಜೇಶ್, ಭರತ್, ಮೋಹನ್ ಸಾಲಿಯಾನ್ ಪಾಲ್ಗೊಂಡಿದ್ದರು.

- Advertisement -

Related news

error: Content is protected !!