- Advertisement -
- Advertisement -
ಮಂಗಳೂರು: ಗಂಡನೇ ಹೆಂಡತಿಯನ್ನು ಮಾರಕಾಯುಧಗಳಿಂದ ಕಡಿದು ಬರ್ಬರ ಹತ್ಯೆನಡೆಸಿ ಬಳಿಕ ತಾನೇ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ ಘಟನೆ ಕಾವೂರಿನಲ್ಲಿ ಇಂದು ನಡೆದಿದೆ.ಕಾವೂರು ನಿವಾಸಿ ಶಾಂತಾ ಮಣಿಯಾನಿ(40) ಹತ್ಯೆಗೀಡಾದ ಮಹಿಳೆ.

ಈಕೆಯ ಗಂಡ ಉತ್ತರ ಕನ್ನಡ ಮೂಲದವ ಎನ್ನಲಾಗಿದೆ. ಪತಿ ಪತ್ನಿಯಲ್ಲಿ ಜಗಳ ಉಂಟಾಗಿ ಸಿಟ್ಟಿನಿಂದ ಹೆಂಡತಿಯನ್ನು ಹತ್ಯೆ ಮಾಡಿದ್ದಾಗಿ ಹೇಳಲಾಗಿದೆ. ಆದರೆ ಸ್ಪಷ್ಟ ಮಾಹಿತಿ ಲಭಿಸಿಲ್ಲ. ಕಾವೂರು ಪೋಲೀಸರು ಭೇಟಿ ನೀಡಿದ್ದಾರೆ

- Advertisement -