Wednesday, September 30, 2026
spot_imgspot_img
spot_imgspot_img

ಮಂಗಳೂರು: 1.60 ಲಕ್ಷ ಮೌಲ್ಯದ 16 ಗ್ರಾಂ ಮಾದಕ ವಸ್ತು ವಶ – ಆರೋಪಿಯ ಬಂಧನ

- Advertisement -
- Advertisement -

ಮಂಗಳೂರು: ನಗರದಲ್ಲಿ ಮಾದಕ ವಸ್ತು ಮಾರಾಟ ಜಾಲದ ವಿರುದ್ಧ ಕಾವೂರು ಪೊಲೀಸರು ಮತ್ತೊಂದು ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.

ಸೆ.29 ರಂದು ಕಾವೂರು ಪೊಲೀಸ್ ಠಾಣೆಯ ಪೊಲೀಸರು ಮರಕಡ ಗ್ರಾಮದ ಬೊಂದೇಲ್‌ನಿಂದ ಮೂಡುಶೆಡ್ಡೆ ಕಡೆಗೆ ಹೋಗುವ ಡಾಮರು ರಸ್ತೆಯ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ವಶಕ್ಕೆ ಪಡೆದ ವ್ಯಕ್ತಿಯನ್ನು ಮೊಹಮ್ಮದ್ ಇರ್ಫಾನ್ ಎ.ಕೆ (26) ಕೆ.ಸಿ. ರೋಡ್, ಉಳ್ಳಾಲ, ಮಂಗಳೂರು ಎಂದು ಗುರುತಿಸಲಾಗಿದೆ.ಆತನ ವಶದಲ್ಲಿದ್ದ ಸುಮಾರು 16 ಗ್ರಾಂ ತೂಕದ MDMA ಮಾದಕ ವಸ್ತುವನ್ನು ಕಾನೂನು ಬದ್ಧವಾಗಿ ವಶಪಡಿಸಿಕೊಳ್ಳಲಾಗಿದ್ದು, ವಶಪಡಿಸಿಕೊಂಡ ಮಾದಕ ವಸ್ತುವಿನ ಅಂದಾಜು ಮೌಲ್ಯ ಸುಮಾರು ರೂ. 1,60,000/- ಆಗಿರುತ್ತದೆ.

ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 128/2026, NDPS ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.ಆರೋಪಿಯ ಹಿಂದಿನ ಕೃತ್ಯಗಳು:ಆರೋಪಿ ಮೊಹಮ್ಮದ್ ಇರ್ಫಾನ್ ವಿರುದ್ಧ ಈ ಹಿಂದೆ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಳ್ಳಾಲ ಪೊಲೀಸ್ ಠಾಣೆ ಅ.ಕ್ರ: 02/2020 – ರಾತ್ರಿ ಕಳ್ಳತನ
ಪುಂಜಾಲಕಟ್ಟೆ ಪೊಲೀಸ್ ಠಾಣೆ ಅ.ಕ್ರ: 79/2020 – ರಾತ್ರಿ ಕಳ್ಳತನ
ಉಳ್ಳಾಲ ಪೊಲೀಸ್ ಠಾಣೆ ಅ.ಕ್ರ: 25/2024 – ಗಾಂಜಾ ಸೇವನೆ

- Advertisement -

Related news

error: Content is protected !!