Wednesday, August 26, 2026
spot_imgspot_img
spot_imgspot_img

ಮಂಗಳೂರು: 2019ರ ಕೊಲೆ ಪ್ರಕರಣ: ಆರೋಪಿಗೆ 5 ವರ್ಷ ಜೈಲು ಶಿಕ್ಷೆ, ₹11 ಸಾವಿರ ದಂಡ

- Advertisement -
- Advertisement -

ಮಂಗಳೂರು: 2019 ರಲ್ಲಿ ನಡೆದಿದ್ದ ಸಹೋದರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸ್ಯಾಮ್ಸನ್ ಪ್ರಾನ್ಸಿಸ್ ಕುಟಿನ್ಹಾ ಅವರಿಗೆ ಮಾನ್ಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಆ. 24 ರಂದು ಶಿಕ್ಷೆ ವಿಧಿಸಿದೆ.

ದಿನಾಂಕ 8-10-2019 ರಂದು ಮಧ್ಯಾಹ್ನ 12:00 ಗಂಟೆಗೆ ಕಂಬಳಪದವು ಎಂಬಲ್ಲಿನ ತನ್ನ ವಾಸದ ಮನೆಯಲ್ಲಿ ಆರೋಪಿ ಸ್ಯಾಮ್ಸನ್ ಕುಟಿನ್ಹಾ, ತನ್ನ ತಂಗಿ ಫಿಯೋನಾ ಸ್ವೀಡಲ್ ಕುಟಿನ್ಹಾ ಅವರಿಂದ ಮೊಬೈಲ್ ಕೇಳಿದ್ದಾನೆ. ಈ ವಿಚಾರವಾಗಿ ಇಬ್ಬರ ನಡುವೆ ಮಾತುಕತೆ ನಡೆದು ಕೋಪಗೊಂಡ ಆರೋಪಿಯು ಸುತ್ತಿಗೆಯಿಂದ ತಂಗಿಯ ತಲೆಗೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಮನೆಯ ಹಿಂಭಾಗದ ಪೊದೆಯಲ್ಲಿ ಬಚ್ಚಿಟ್ಟಿದ್ದಾನೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಘಟನೆಯ ಬಳಿಕ ಮೃತಳ ತಂದೆ ಫ್ರಾನ್ಸಿಸ್ ಕುಟಿನ್ಹಾ ಅವರು ಮಗಳು ಕಾಣೆಯಾಗಿರುವ ಕುರಿತು ಠಾಣೆಯಲ್ಲಿ ದೂರು ನೀಡಿದ್ದರು. ಈ ಸಂಬಂಧ ಮೊ.ನಂ 67/2019 ಕಲಂ 363 ಐಪಿಸಿ ಅಡಿ ಪ್ರಕರಣ ದಾಖಲಾಗಿತ್ತು.

ನಂತರ ಪ್ರಕರಣದ ತನಿಖೆಯನ್ನು ಎಸಿಪಿ ದಕ್ಷಿಣ, ಟಿ. ಕೋದಂಡರಾಮ್ ರವರು ನಡೆಸಿ, 10-01-2020 ರಂದು ಮಾನ್ಯ ನ್ಯಾಯಾಲಯಕ್ಕೆ ಕಲಂ 302, 201 ಐಪಿಸಿ ಅಡಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯವು ದಿನಾಂಕ 24-08-2026 ರಂದು ಆರೋಪಿಗೆ ಕಲಂ 304(2) ಐಪಿಸಿ ಅಡಿ 4 ವರ್ಷ ಸಜೆ ಮತ್ತು ರೂ. 10,000/- ದಂಡ ಹಾಗೂ ಕಲಂ 201 ಐಪಿಸಿ ಅಡಿ 1 ವರ್ಷ ಸಜೆ ಮತ್ತು ರೂ. 1,000/- ದಂಡ ವಿಧಿಸಿ ಆದೇಶಿಸಿದೆ. ಎರಡೂ ಶಿಕ್ಷೆಗಳು ಒಟ್ಟಿಗೆ ಜಾರಿಗೆ ಬರಲಿವೆ.ಈ ಪ್ರಕರಣದಲ್ಲಿ ಅಭಿಯೋಜನಾ ಪರವಾಗಿ ಶ್ರೀಮತಿ ಜ್ಯೋತಿ ಪ್ರಮೋದ್ ನಾಯಕ್ ವಾದ ಮಂಡಿಸಿದ್ದರು.

- Advertisement -

Related news

error: Content is protected !!