Wednesday, September 9, 2026
spot_imgspot_img
spot_imgspot_img

ಮಂಗಳೂರು: 5 ವರ್ಷದಿಂದ ತಲೆಮರೆಸಿಕೊಂಡಿದ್ದ ಕಳ್ಳತನ ಪ್ರಕರಣದ ಆರೋಪಿತೆ ಬಂಧನ

- Advertisement -
- Advertisement -

ಮಂಗಳೂರು: ಮನೆ ಕೆಲಸದವರ ಕಳವು ಪ್ರಕರಣದಲ್ಲಿ ಸುಮಾರು 5 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎಲ್‌ಪಿಸಿ ಆರೋಪಿಯನ್ನು ಕಾವೂರು ಪೊಲೀಸರು ದಸ್ತಗಿರಿ ಮಾಡಿದ್ದಾರೆ.

ಕಾವೂರು ಪೊಲೀಸ್ ಠಾಣೆ ಅ.ಕ್ರ 33/2019 ಕಲಂ 381 IPC ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾನ್ಯ ಹಿರಿಯ ಸಿಜೆ & ಸಿಜೆಎಂ ನ್ಯಾಯಾಲಯ, ಮಂಗಳೂರು ರವರ LPC No 05/2024 ರ ಆರೋಪಿತೆ, ಲತಾ ಮಾರಿಯಾ (44 ವರ್ಷ), W/O Late ಲಾಸ್ರದೋ ಮಾರಿಯಾ, ವಾಸ: ಮನೆ ನಂ. 4-180E, ಆನಂದ ನಗರ, ಆಕಾಶ ಭವನ, ಮಂಗಳೂರು ಎಂಬಾಕೆಯ ಮೇಲೆ ದಸ್ತಗಿರಿ ವಾರಂಟ್ ಹೊರಡಿಸಲಾಗಿತ್ತು.

ವಾರಂಟ್ ಜಾರಿಯಾದ ನಂತರವೂ ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ LPC ಆಗಿದ್ದರು. ಈ ಹಿನ್ನೆಲೆಯಲ್ಲಿ ಕಾವೂರು ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಜ್ಯೋತಿ ನಗರದಿಂದ ದಸ್ತಗಿರಿ ಮಾಡಿದ್ದು, ಈ ದಿನ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!