Tuesday, June 9, 2026
spot_imgspot_img
spot_imgspot_img

ಮಂಗಳೂರು: ಮನೆ ಕಿಟಕಿಯ ಗ್ರಿಲ್ ಕತ್ತರಿಸಿ ಕಳವಿಗೆ ಯತ್ನ..!

- Advertisement -
- Advertisement -

ಮಂಗಳೂರು: ಕಳ್ಳರು ಮನೆಯೊಂದರ ಕಿಟಕಿಯ ಗ್ರಿಲ್ ಕತ್ತರಿಸಿ ಕಳವಿಗೆ ಯತ್ನಿಸಿದ ಘಟನೆ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಕಲ್ ರಸ್ತೆಯಲ್ಲಿ ನಡೆದಿದೆ.

ಕೋಡಿಕಲ್ ರಸ್ತೆಯಲ್ಲಿನ ಮನೆಯೊಂದರಲ್ಲಿ ಮನೆ ಮಂದಿ ಮಲಗಿದ್ದ ವೇಳೆ ಈ ಕೃತ್ಯ ನಡೆದಿದ್ದು, ಸಮೀಪದ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳರ ಚಲನವಲನ ಸೆರೆಯಾಗಿದೆ. ಮುಂಜಾನೆ 2 ಗಂಟೆ ಸುಮಾರಿಗೆ ಐವರ ತಂಡ ಮನೆಯೊಂದನ್ನು ಆವರಣ ಪ್ರವೇಶಿಸುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮುಖ ಗವಚ ಧರಿಸಿರುವ ಕಳ್ಳರು ಬ್ಯಾಗ್, ಮತ್ತು ಲೈಟ್ ಅನ್ನು ಹೊಂದಿದ್ದಾರೆ. ಈ ತಂಡ ಮನೆಯ ಕೊಠಡಿಯ ಕಿಟಕಿಯ ಗ್ರಿಲ್ ಅನ್ನು ಕತ್ತರಿಸಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದೆ.

- Advertisement -

Related news

error: Content is protected !!