- Advertisement -
- Advertisement -









ಮಂಗಳೂರು: ರಸ್ತೆ ದಾಟುತಿದ್ದ ಮಹಿಳೆಗೆ ಆಟೋ ರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಗಂಭೀರ ಗಾಯಗೊಂಡ ಘಟನೆ ಮೂಲ್ಕಿ ತಾಲೂಕಿನ ಕಿನ್ನಿಗೋಳಿಯ ರಾಮನಗರ ಬಳಿ ನಡೆದಿದೆ.
ಗಂಭೀರ ಗಾಯಗೊಂಡ ಮಹಿಳೆಯನ್ನು ರಾಜರತ್ನಪುರ ನಿವಾಸಿ ಚೇತನಾ (35) ಎಂದು ಗುರುತಿಸಲಾಗಿದೆ.
ಪಿಗ್ಮಿ ಕಲೆಕ್ಷನ್ ಮುಗಿಸಿ ಟ್ಯೂಶನ್ ಗೆ ತೆರಳಿದ್ದ ಮಗಳನ್ನು ಕರೆತರಲು ಟ್ಯೂಶನ್ ಸೆಂಟರ್ ಬಳಿ ಬಂದ ಚೇತನಾ ಏಕಾಏಕಿ ರಸ್ತೆ ದಾಟಲು ಮುಂದಾಗಿದ್ದರು. ಈ ವೇಳೆ ಕಟೀಲಿನಿಂದ ಕಿನ್ನಿಗೋಳಿ ಕಡೆಗೆ ಬರುತ್ತಿದ್ದ ಆಟೋ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿದೆ. ಮಗಳ ಮುಂದೆಯೇ ತಾಯಿಗೆ ಆಟೋ ಡಿಕ್ಕಿಯಾಗಿದ್ದು, ಘಟನೆ ನಡೆದ ತಕ್ಷಣ ಆಟೋ ಎತ್ತಿ ತಾಯಿಯನ್ನು ಮಗಳು ಮೇಲಕ್ಕೆತ್ತಿದ್ದಾಳೆ.
ಘಟನೆಯಲ್ಲಿ ಆಟೋ ಚಾಲಕ, ಪ್ರಯಾಣಿಕ ಸೇರಿ ಸ್ಥಳದಲ್ಲಿದ್ದವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯ ಅಂಗಡಿಯ ಸಿಸಿಟಿವಿಯಲ್ಲಿ ಅಪಘಾತದ ದೃಶ್ಯ ಸೆರೆಯಾಗಿದೆ.
- Advertisement -