ಫಾಜಿಲ್ ಹತ್ಯೆಗೆ ಪ್ರತೀಕಾರ, ಸಹೋದರ ಭಾಗಿ…!





ಮಂಗಳೂರು: ಹಿಂದೂ ಕಾರ್ಯಕರ್ತ ಹಾಗೂ ಪೊಲೀಸ್ ದಾಖಲೆಗಳ ಪ್ರಕಾರ ರೌಡಿ ಶೀಟರ್ ಆಗಿದ್ದ ಸುಹಾಸ್ ಶೆಟ್ಟಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಸುಹಾಸ್ ಶೆಟ್ಟಿ ಅವರ ಹತ್ಯೆ ನಗರದಲ್ಲಿ ಸಂಚಲನ ಮೂಡಿಸಿತ್ತು. ತಡರಾತ್ರಿ ನಡೆದ ಈ ಬರ್ಬರ ಕೃತ್ಯದ ತನಿಖೆ ಚುರುಕುಗೊಳಿಸಿದ್ದ ಪೊಲೀಸರು, ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಎಂಟು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತ ಆರೋಪಿಗಳ ವಿವರಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.
1)ಅಬ್ದುಲ್ ಸಫ್ವಾನ್ ( ಶಾಂತಿಗುಡ್ಡೆ ನಿವಾಸಿ, 29ವರ್ಷ, ಡ್ರೈವರ್ ಕೆಲಸ )
2) ನಿಯಾಜ್ (ಶಾಂತಿಗುಡ್ಡೆ ನಿವಾಸಿ, 28 ವರ್ಷ, ಮೇಸ್ತ್ರಿ ಹೆಲ್ಪರ್ ಕೆಲಸ )
3) ಮೊಹಮ್ಮದ್ ಮುಝಮಿಲ್ ( ಕೆಂಜಾರು ಅಪಾರ್ಟ್ಮೆಂಟ್ ನಿವಾಸಿ, 32 ವರ್ಷ, 4 ತಿಂಗಳ ಹಿಂದೆ ಸೌದಿ ಅರೇಬಿಯಾ ದಲ್ಲಿ ಸೇಲ್ಸ್ ಮ್ಯಾನ್ ಆಗಿ, 4 ತಿಂಗಳ ಹಿಂದೆ ಮದುವೆಯಾಗಿದ್ದ)
4)ಕಲಂದರ್ ಶಾಫಿ (31 ವರ್ಷ, ಕುರ್ಸು ಗುಡ್ಡೆ ನಿವಾಸಿ, ಬೆಂಗಳೂರಿನಲ್ಲಿ ಸೇಲ್ಸ್ ಮ್ಯಾನ್ )
5) ರಂಜಿತ್ (19 ವರ್ಷ, ಚಿಕ್ಕಮಗಳೂರು ನಿವಾಸಿ, ಡ್ರೈವಿಂಗ್ ಕೆಲಸ )
6) ನಾಗರಾಜ್ (20 ವರ್ಷ, ಚಿಕ್ಕಮಗಳೂರು ನಿವಾಸಿ, ಶಾಮಿಯಾನ ಅಂಗಡಿಯಲ್ಲಿ ಕೆಲಸ )
7) ಮೊಹಮ್ಮದ್ ರಿಜ್ವಾನ್ (28 ವರ್ಷ, ಜೋಕಟ್ಟೆ ಮಂಗಳೂರು ನಿವಾಸಿ, ಸೌದಿ ಅರೇಬಿಯಾ ಆಯಿಲ್ ಪ್ಲಾಂಟ್ ಶಟ್ ಡೌನ್ ಕೆಲಸ)
8) ಅದಿಲ್ ಮೆಹರೂಫ್ (ಫಾಜಿಲ್ ಸಹೋದರ)
ಬಂಧಿತರಲ್ಲಿ ಮಂಗಳೂರು ಸ್ಥಳೀಯರು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಯುವಕರೂ ಸೇರಿದ್ದಾರೆ. ಕೆಲವರ ಮೇಲೆ ಈ ಹಿಂದೆಯೇ ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯುವ ಸಾಧ್ಯತೆಯಿದೆ. ಕೊಲೆಯ ಹಿಂದಿನ ನಿಖರ ಕಾರಣ,ಸಂಚು ಹಾಗೂ ಇದರಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.