Thursday, July 23, 2026
spot_imgspot_img
spot_imgspot_img

ಮಂಗಳೂರು: ವ್ಯಾಟ್ಸಾಪ್ ಗ್ರೂಪ್‌ನಲ್ಲಿ ಸುಳ್ಳು ಸಂದೇಶ ರವಾನೆ ಆರೋಪ: ಇಬ್ಬರು ಆರೋಪಿಗಳ ಬಂಧನ

- Advertisement -
- Advertisement -

ಮಂಗಳೂರು: ವ್ಯಾಟ್ಸಾಪ್ ಗ್ರೂಪ್‌ನಲ್ಲಿ ವ್ಯಕ್ತಿಯೋರ್ವ ಬ್ಯಾರಿ ಭಾಷೆಯಲ್ಲಿ ಮಾತಾಡುತ್ತಾ ಸಮಾಜದಲ್ಲಿ ಕೋಮು ಗಲಭೆಯಾಗುವಂತಹ ಕೃತ್ಯಕ್ಕೆ ಕಾರಣವಾಗುವ ಸಂದೇಶವನ್ನು ರವಾನಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಮುಲ್ಕಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ತಾಳಿಪಾಡಿ ಗ್ರಾಮದ ಗುತ್ತಕಾಡು ಶಾಂತಿನಗರದ ಮೊಹಮ್ಮದ್ ಅನ್ವರ್ (44) ಹಾಗೂ ತಾಯಿರ್ ನಕಾಶ್(42) ಎಂದು ಗುರುತಿಸಲಾಗಿದೆ.

ಅ.15ರಂದು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಿಯೋರ್ವ ಬ್ಯಾರಿ ಭಾಷೆಯಲ್ಲಿ ಮಾತಾಡುತ್ತಾ ಸಮಾಜದಲ್ಲಿ ಕೋಮು ಗಲಭೆಯಾಗುವಂತಹ ಕೃತ್ಯಕ್ಕೆ ಕಾರಣವಾಗುವ ಸಂದೇಶವನ್ನು ರವಾನಿಸಿದ್ದು. ಈ ಮೆಸೇಜ್‌ನಲ್ಲಿ ‘ಒಂದು ಗ್ಯಾಂಗ್ ಇದೆ ಯಾರು CARLESS ಮಾಡಬೇಡಿ, ಖಾಲಿ ಬಜಪೆ ಸುರತ್ಕಲ್ ಅಂತಲ್ಲ, ಅವರ ಗ್ಯಾಂಗ್ ಇರುವುದು ಭಟ್ಟಕೋಡಿಯಲ್ಲಿ. ಬಜಪೆ ಮತ್ತು ಸುರತ್ಕಲ್ ನ ಜನರು ಮಾತ್ರ CAREFULL ಆಗಿರುವುದಲ್ಲ. ಕಿನ್ನಿಗೋಳಿಯವರು CAREFULL ಆಗಿರಬೇಕಾಗುತ್ತದೆ ಹಾಗೂ ಎಲ್ಲಾ ಕುಡುಕರ ಗ್ಯಾಂಗ್ ಇರುವುದು ಭಟ್ಟಕೋಡಿ ಬಾರ್‌‌ನಲ್ಲಿ. ನಾನು ಖುದ್ದು ಅವರ ಟೀಮ್ ಎಲ್ಲಾ ಭಟ್ಟಕೋಡಿಯಲ್ಲಿ ನೋಡಿದ್ದೇನೆ.

ಸುಮಾರು 1ವರೆ ತಿಂಗಳ ಹಿಂದೆ 15 ಜನ ಭಟ್ಟಕೋಡಿಯಲ್ಲಿ ಕುಡಿದು ಪಾರ್ಟಿ ಮಾಡಿ ಹೋಗಿದ್ದಾರೆ. ಯಾರೂ CARLESS ಮಾಡಬೇಡಿ, ಎಂದು ಸಾರ್ವಜನಿಕರಲ್ಲಿ ಆಂತಕ ಮೂಡಿಸುವಂತಹ ಸುಳ್ಳು ಮಾಹಿತಿಯನ್ನು ವ್ಯಾಟ್ಸಾಪ್ ಗ್ರೂಪ್‌ನಲ್ಲಿ ಶೇರ್ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ರೀತಿ ಆತಂಕಕಾರಿ ವಾಯ್ಸ್ ಮೇಸೆಜನ್ನು ಮಾಡಿದ ಕಿನ್ನಿಗೋಳಿಯ ಮೊಹಮ್ಮದ್ ಅನ್ವರ್ (44) ಹಾಗೂ ತಾಯಿರ್ ನಕಾಶ್(42) ಎಂಬುವರನ್ನು ಬಂಧಿಸಿ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಠಾಣಾ ಅಕ್ರ: 108/2025 ಕಲಂ: 353(2) ಬಿಎನ್ಎಸ್ ನಂತೆ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ .

ಹಾಗಾಗಿ ಸೋಷಿಯಲ್ ಮೀಡಿಯಾದಲ್ಲಿ ಬರುವಂತಹ ಇಂತಹ ಆಂತಕಕಾರಿ ಸಂದೇಶಗಳ ಬಗ್ಗೆ ಸಾರ್ವಜನಿಕರು ಗಮನ ಕೊಡದೇ ಇಂತಹ ಸಂದೇಶಗಳನ್ನು ಶೇರ್ ಮಾಡದಂತೆ ಮಂಗಳೂರು ನಗರ ಪೊಲೀಸ್ ಘಟಕದ ಪ್ರಕಟಣೆಯಲ್ಲಿ ಸೂಚಿಸಲಾಗಿದೆ.

- Advertisement -

Related news

error: Content is protected !!