- Advertisement -
- Advertisement -





ಮಂಗಳೂರು: ನಗರದ ಲಾಡ್ಜ್‌ನಲ್ಲಿ ಸುಮಾರು (45) ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿ.26ರಂದು ಅಪರಿಚಿತ ವ್ಯಕ್ತಿಯು ಕೊಠಡಿ ಪಡೆದಿದ್ದರು. ಡಿ.31ರಂದು ಬೆಳಗ್ಗೆ ರೂಮ್’ನ ಬೆಡ್ ಮೇಲೆ ಮಲಗಿದ್ದ ವ್ಯಕ್ತಿಯನ್ನು ಲಾಡ್ಜ್ ಸಿಬ್ಬಂದಿ ಕರೆದಾಗ ಯಾವುದೇ ಉತ್ತರ ನೀಡಿಲ್ಲ. ತಕ್ಷಣ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸುಮಾರು 5.8 ಅಡಿ ಎತ್ತರದ, ಎಣ್ಣೆ ಕಪ್ಪುಮೈ ಬಣ್ಣದ, ಕಂದು ಬಣ್ಣದ ಟಿ-ಶರ್ಟ್ ಮತ್ತು ತಿಳಿ ನೀಲಿ ಬಣ್ಣದ ಜೀನ್ಸ್ ಧರಿಸಿರುವ ಈ ವ್ಯಕ್ತಿಯ ಕುರಿತು ಮಾಹಿತಿ ಇದ್ದಲ್ಲಿ ಬಂದರು ಠಾಣೆಯನ್ನು ಸಂಪರ್ಕಿಸಬಹುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ
- Advertisement -








