ತಿರುಪತಿ: ರೀಲ್ಸ್ ಮಾಡಲು ಹೋಗಿ ಜಲಪಾತದಿಂದ ಕೆಳಗೆ ಬಿದ್ದು ಮಂಗಳೂರು ಮೂಲದ ವಿದ್ಯಾರ್ಥಿಯೊಬ್ಬ ತನ್ನ ಜೀವವನ್ನೆ ಕಳೆದುಕೊಂಡಿದ್ದಾನೆ.
ಮೃತ ವಿದ್ಯಾರ್ಥಿ ಮಂಗಳೂರು ಮೂಲದ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ಸುಮಂತ್ ಎಂದು ಗುರುತಿಸಲಾಗಿದೆ.
ಚೆನ್ನೈನ 22 ವರ್ಷದ ವಿದ್ಯಾರ್ಥಿ ತನ್ನ ಸ್ನೇಹಿತರೊಂದಿಗೆ ತಿರುಪತಿ ಬಳಿಯ ತಲಕೋನಾ ಜಲಪಾತಕ್ಕೆ ತೆರಳಿದ್ದ. ಸುಮಂತ್ ಈ ವೇಳೆ ನೀರಿಗೆ ಜಿಗಿಯಲು ಹೋಗಿದ್ದರು. ಈ ಸಮಯದಲ್ಲಿ, ಅವರು Instagram ರೀಲ್ಸ್‌ಗಾಗಿ ನೀರಿಗೆ ಹಾರಿ ವೀಡಿಯೊವನ್ನು ಶೂಟ್ ಮಾಡಲು ತಮ್ಮ ಸ್ನೇಹಿತರನ್ನು ಕೇಳಿದರು. ಅದರಂತೆ ಆತನ ಸ್ನೇಹಿತರು ಕ್ಯಾಮರಾದಲ್ಲಿ ವಿಡಿಯೋ ರೆಕಾರ್ಡ್ ಮಾಡಲು ಆರಂಭಿಸಿದರು.
ಸುಮಂತ್ ಬಂಡೆಯ ಮೇಲೆ ಹೋಗಿ 10 ರಿಂದ 15 ಅಡಿ ದೂರದಿಂದ ನೀರಿಗೆ ಹಾರಿದ್ದಾರೆ. ನೀರಿಗೆ ಹಾರಿದ ನಂತರ ಸುಮಂತ್ ನೀರಿನಿಂದ ಮೇಲಕ್ಕೆ ಬರದ ಹಿನ್ನಲೆ ಸ್ನೇಹಿತರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ರಕ್ಷಣಾ ತಂಡ ಕೂಡಲೇ ಸ್ಥಳಕ್ಕೆ ಆಗಮಿಸಿ ಸುಮಂತ್‌ಗಾಗಿ ಹುಡುಕಾಟ ಆರಂಭಿಸಿದೆ.
ಸುದೀರ್ಘ ಹುಡುಕಾಟ ನಡೆಸಿದರೂ ಮೃತದೇಹ ಪತ್ತೆಯಾಗಿಲ್ಲ. ಕತ್ತಲಾಗುತ್ತಿದ್ದಂತೆ ರಕ್ಷಣಾ ಕಾರ್ಯ ಸ್ಥಗಿತಗೊಂಡಿತು. ಇದಾದ ಬಳಿಕ ಶನಿವಾರ ಬೆಳಗ್ಗೆ ಸುಮಂತ್ ಮೃತದೇಹ ನೀರಿನ ಅಡಿಯಲ್ಲಿ ಪತ್ತೆಯಾಗಿದೆ. ಆತನ ತಲೆ ಎರಡು ಕಲ್ಲುಗಳ ನಡುವೆ ಸಿಲುಕಿಕೊಂಡಿತ್ತು. ಕಲ್ಲಿನಲ್ಲಿ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಪೊಲೀಸರ ತಿಳಿಸಿದ್ದಾರೆ.