Friday, October 30, 2026
spot_imgspot_img
spot_imgspot_img

ಮಂಗಳೂರು: ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿ ಮಹಿಳೆಗೆ ವಂಚನೆ

- Advertisement -
- Advertisement -

ಮಂಗಳೂರು: ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿ ಮಹಿಳೆಯೊಬ್ಬರಿಗೆ 2.94 ಲಕ್ಷ ರೂಪಾಯಿ ವಂಚಿಸಿರುವ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ಮೇ 22ರಂದು ಬ್ಯಾಂಕೊಂದರ ಪುತ್ತೂರು ಶಾಖೆಯಲ್ಲಿ 2.94 ಲಕ್ಷ ರೂಪಾಯಿ ಗೋಲ್ಡ್ ಲೋನ್ ಪಡೆದಿದ್ದರು. ಜೂನ್ ತಿಂಗಳಿನಿಂದ ಪ್ರತೀ ತಿಂಗಳ 6 ಸಾವಿರ ರೂಪಾಯಿ ಇಎಂಐ ಪಡೆಯುವ ಬಗ್ಗೆ ಬ್ಯಾಂಕ್ ವ್ಯವಸ್ಥಾಪಕರಿಗೆ ತಿಳಿಸಿದ್ದರು. ಆದರೆ ಮೇ 22ರಂದೇ 6 ಸಾವಿರ ರೂಪಾಯಿ ಕಡಿತವಾಗಿದೆ. ಆ ಹಣವನ್ನು ವಾಪಾಸ್ ಪಡೆಯುವ ನಿಟ್ಟಿನಲ್ಲಿ, ಆನೈನ್ ನಲ್ಲಿ ಬ್ಯಾಂಕ್ ಶಾಖೆ ಫೋನ್ ನಂಬರ್ ಹುಡುಕಿ ಬ್ರಾಂಚ್ ಮ್ಯಾನೇಜರ್‌ಗೆ ಕರೆ ಮಾಡಿದ್ದಾರೆ. ಆದರೆ ಕರೆ ಸ್ವೀಕರಿಸದೆ ಕಟ್ ಆಗಿದೆ. ಅನಂತರ ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿಕೊಂಡು ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದೆ.

ವಿಚಾರಿಸಿದಾಗ ಪುತ್ತೂರು ಶಾಖೆಯ ಮ್ಯಾನೇಜರ್ ಎಂದು ಕರೆ ಮಾಡಿದ ವ್ಯಕ್ತಿ ತಿಳಿಸಿದ್ದಾನೆ. ಆತ ಸ್ಮಿನ್ ಸ್ಮಾರ್ಟ್ ಬಟನ್ ಕ್ಲಿಕ್ ಮಾಡುವಂತೆ ತಿಳಿಸಿದ್ದು ಅದರಂತೆ ಮಹಿಳೆ ಕ್ಲಿಕ್ ಮಾಡಿದ್ದಾರೆ. ಆಗ ಫೋನ್‌ಪೇ ಮೂಲಕ 94,000 ರೂ. ಹಣ ಖಾತೆಯಿಂದ ಕಟ್ ಆಗಿದೆ. ಕರೆಯಲ್ಲಿದ್ದಾಗಲೇ ಬ್ಯಾಂಕ್ ಆಪ್ ತೆರೆಯಿರಿ ಹಣ ವಾಪಾಸು ಬರುತ್ತದೆ ಎಂದು ತಿಳಿಸಿದ್ದಾನೆ. ಅದರಂತೆ ಆ್ಯಪ್ ಓಪನ್ ಮಾಡಿದ್ದು, ಆಗ ಖಾತೆಯಿಂದ 1.98 ಲಕ್ಷ ರೂ. ವರ್ಗಾವಣೆಯಾಗಿದೆ.

ಈ ರೀತಿ ಒಟ್ಟು 2.92 ಲಕ್ಷ ರೂಪಾಯಿ ಹಣವನ್ನು ಅಪರಿಚಿತ ವ್ಯಕ್ತಿಗಳು ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಮೋಸಗೊಂಡ ಹಣ ವಾಪಸು ಕೊಡಿಸಬೇಕು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!