Friday, July 4, 2025
spot_imgspot_img
spot_imgspot_img

ಮಾಣಿಯಲ್ಲಿ ಮುಂದುವರಿದ ಸರಣಿ ಕಳ್ಳತನ; ಅಂಗಡಿ ಬಂದ್ ಮಾಡಿ ಮನೆಗೆ ಹೋಗಿ ನೆಮ್ಮದಿಯಿಂದ ಮಲಗುವಂತಿಲ್ಲ: ವರ್ತಕರ ಅಳಲು

- Advertisement -
- Advertisement -

ಮಾಣಿ: ಇಲ್ಲಿನ ಪೇಟೆಯ ನಾಲ್ಕು ಅಂಗಡಿಗಳಿಗೆ ಶನಿವಾರ ರಾತ್ರಿ ಕಳ್ಳರು ನುಗ್ಗಿದ್ದು ತರಕಾರಿ ಅಂಗಡಿಗಳು ಹಾಗೂ ಬೇಕರಿ ಅಂಗಡಿಗೆ ನುಗ್ಗಿ ಚಿಲ್ಲರೆ ಹಣವನ್ನು ಕದ್ದುಕೊಂಡು ಹೋಗಿದ್ದಾರೆ. ಮರುದಿನ ಮತ್ತೆ ಆದಿತ್ಯ ವಾರ ರಾತ್ತಿ ಮಾಣಿ ಪೆಟ್ರೋಲ್ ಬಂಕ್ ಹತ್ತಿರ ಇರುವ ಟಯರ್ ಅಂಗಡಿ ಹಾಗೂ ಹಳೀರದಲ್ಲಿ ಇರುವ ಮತ್ತೊಂದು ಟಯರ್ ಅಂಗಡಿಗೆ ನುಗ್ಗಿ ಸಾವಿರಾರು ರೂಪಾಯಿಯ ಟೈರುಗಳನ್ನು ಕದ್ದುಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ.

ರಾತ್ರಿ ಅಂಗಡಿಗೆ ಬೀಗ ಹಾಕಿ ಮನೆಗೆ ಹೋಗಿ ನೆಮ್ಮದಿಯಿಂದ ಮಲಗುವಂತಿಲ್ಲ ಎಂದು ವರ್ತಕರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಪ್ರಕರಣ ದಾಖಲಿಸಿ ಏನೂ ಪ್ರಯೋಜನವಿಲ್ಲ ಇದುವರೆಗೆ ನಡೆದ ಕಳ್ಳತನದಲ್ಲಿ ಯಾರೂ ಸಿಕ್ಕಿಲ್ಲ ಎಂದು ಅಸಹನೆ ವ್ಯಕ್ತವಾಗಿದೆ.

- Advertisement -

Related news

error: Content is protected !!