- Advertisement -
- Advertisement -


ಮಾಣಿ: ಸೋಶಿಯಲ್ ಇಖ್ವಾ ಫೆಡರೇಶನ್ ಇದರ ನೂತನ ಕಛೇರಿ ಉದ್ಘಾಟನೆಯು ಜೂನ್ 14ನೇ ಶುಕ್ರವಾರ ಸೂರಿಕುಮೇರು ಬದ್ರಿಯಾ ಮಸೀದಿ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದ್ದು ಅದರ ಭಾಗವಾಗಿ ಸಂಜೆ 7 ಗಂಟೆಗೆ ನೇರಳಕಟ್ಟೆ ಇಂಡಿಯನ್ ಆಡಿಟೋರಿಯಂ ನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಸಭಾ ಕಾರ್ಯಕ್ರಮ ನಡೆಯಲಿದೆ.

ಸಂಜೆ 5.30 ಕ್ಕೆ ನಡೆಯುವ ಕಛೇರಿ ಉದ್ಘಾಟನೆಯನ್ನು ಹಿರಿಯ ಪತ್ರಕರ್ತ ಬದ್ರುದ್ದೀನ್ ಮಾಣಿ ನೆರವೇರಿಸಲಿದ್ದು ಸೂರಿಕುಮೇರು ಮಸೀದಿ ಖತೀಬ್ ಹಸೈನಾರ್ ಸಅದಿ ದುಆ ಮಾಡುವರು,ಸನ್ಮಾನ ಮತ್ತು ಸಭಾಕಾರ್ಯಕ್ರಮದಲ್ಲಿ ಗೌರವಾನ್ವಿತ ಸ್ಪೀಕರ್ ಯು ಟಿ ಖಾದರ್,ಸಹಿತ ಹಲವಾರು ಗಣ್ಯರು ಮುಖಂಡರು ಭಾಗವಹಿಸಲಿದ್ದಾರೆ.
- Advertisement -