



ಮಾಣಿ: ಕರ್ನಾಟಕ ಮುಸ್ಲಿಂ ಜಮಾಅತ್, ಎಸ್‌ವೈಎಸ್, ಎಸ್ಸೆಸ್ಸೆಫ್ ಸೂರಿಕುಮೇರು ಯುನಿಟ್ ವತಿಯಿಂದ ಖುರ್ರತುಸ್ಸಾದಾತ್ ಕೂರತ್ ತಂಙಳ್ ಅನುಸ್ಮರಣಾ ಕಾರ್ಯಕ್ರಮ ಮಾಣಿಯಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಎಸ್ ಎಸ್ ಅಬ್ದುಲ್ ಬಶೀರ್ ಝುಹ್ರಿ ನೇತೃತ್ವ ನೀಡಿ ಮಾತನಾಡಿ ಅಲ್ಲಾಹನಿಗೆ ಭಯಪಟ್ಟು ತಖ್ವಾದಿಂದ ಜೀವಿಸಿದರೆ ಅವನ ಸಾಮೀಪ್ಯ ಪಡೆಯಬಹುದು ಅದಕ್ಕೊಂದು ಉದಾಹರಣೆ ಖುರ್ರತುಸ್ಸಾದಾತ್ ಫಝಲ್ ತಂಙಳ್ ಕೂರತ್ ಆಗಿದ್ದಾರೆ ಇಂದು ಪ್ರತಿದಿನ ನಾಡು ಹೊರನಾಡು ವಿದೇಶಗಳಲ್ಲಿ ತಂಙಳ್ ರವರ ಸ್ಮರಣೆ ನಡೆಯುತ್ತಿದೆ,ಅವರ ಖಬರ್ ಪ್ರಸಿದ್ಧ ಝಿಯಾರತ್ ಕೇಂದ್ರವಾಗುತ್ತಿದೆ,ಇವೆಲ್ಲವೂ ಅಲ್ಲಾಹನು ಅವರಿಗೆ ನೀಡಿದ ಗೌರವವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್‌ವೈಎಸ್ ಮಾಣಿ ಸರ್ಕಲ್ ಅಧ್ಯಕ್ಷ ಹೈದರ್ ಸಖಾಫಿ ಶೇರಾ ಶುಭಹಾರೈಸಿದರು. ನಾಯಕರುಗಳಾದ ಕಾಸಿಂ ಪಾಟ್ರಕೋಡಿ, ಇಸ್ಮಾಯಿಲ್ ಹಾಜಿ ಬುಡೋಳಿ,ಹಬೀಬ್ ಶೇರಾ,ಜಬ್ಬಾರ್ ಪಾಟ್ರಕೋಡಿ, ಯೂಸುಫ್ ಹಾಜಿ ಸೂರಿಕುಮೇರು, ಹಸೈನಾರ್ ಹಾಜಿ ಸೂರಿಕುಮೇರು, ಅಬ್ದುಲ್ ಕರೀಂ ಸೂರಿಕುಮೇರು, ಹಂಝ ಸೂರಿಕುಮೇರು, ಇಬ್ರಾಹಿಂ ಮುಸ್ಲಿಯಾರ್ ಹಳೀರ, ಫಾರೂಕ್ ಶೂ ಪ್ಯಾಲೇಸ್,ಕಲಂದರ್ ಬುಡೋಳಿ, ಸಾಬಿತ್ ಪಾಟ್ರಕೋಡಿ, ಹಸೈನ್ ಟೈಲರ್ ಸೂರಿಕುಮೇರು, ಉಮ್ಮರ್ ಚಿಕನ್ ಸೂರಿಕುಮೇರು, ಶಬೀರ್ ಬದ್ರಿಯಾ ಸೂರಿಕುಮೇರು,ಸುಲೈಮಾನ್ ನೆಲ್ಲಿ,ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದೊಂದಿಗೆ ಮಹ್‌ಳರತುಲ್ ಬದ್ರಿಯಾ ಮಜ್ಲಿಸ್ ಮತ್ತು ಕೆಎಂಜೆ ನಾಯಕರ ಸರ್ಕಲ್ ಭೇಟಿ ನಡೆಸಲಾಯಿತು. ಸಲೀಂ ಮಾಣಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.