Thursday, May 2, 2024
spot_imgspot_img
spot_imgspot_img

ಮಾಣಿಲ: ಹಾಳೆತಟ್ಟೆ ತಯಾರಿಕ ಘಟಕ ಉದ್ಘಾಟನಾ ಕಾರ್ಯಕ್ರಮ

- Advertisement -G L Acharya panikkar
- Advertisement -

ಮಾಣಿಲ: ದೀನ್‌ ದಯಾಳ್‌ ಅಂತ್ಯೋದಯ ಯೋಜನೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಮಾರುಕಟ್ಟೆ ಜೋಡಣೆ ವಿಭಾಗ ಯೋಜನೆಯಡಿಯಲ್ಲಿ ಹಾಳೆತಟ್ಟೆ ಘಟಕವನ್ನು ನಮನ ಸಂಜೀವಿನಿ ರೈತ ಉತ್ಪಾದಕರ ಸಂಘ ಎಂಬ ಹೆಸರಿನಲ್ಲಿ ನೇತ್ರಾವತಿ ಸಂಜೀವಿನಿ ಗ್ರಾಮ ಪಂಚಾಯತ್‌ ಮಟ್ಟದ ಒಕ್ಕೂಟ, ಮಾಣಿಲ ಪಂಚಾಯತ್‌, ತಾಲೂಕು ಪಂಚಾಯತ್‌ ಬಂಟ್ವಾಳ ಇದರ ಪ್ರಾಯೋಜಕತ್ವದಲ್ಲಿ ರೈತ ಉತ್ಪಾದಕರ ಸಂಘದ ಉದ್ಘಾಟನಾ ಕಾರ್ಯಕ್ರಮ ಫೆ. 19 ರಂದು ನಡೆಯಿತು.

ಸಂಘವನ್ನು ಮಾಣಿಲ ಗ್ರಾಮ ಪಂಚಾಯತ್‌ ಅಧ್ಯಕ್ಷ ಶ್ರೀಧರ ಬಾಳೆಕಲ್ಲುರವರು ಉದ್ಘಾಟಿಸಿ ಹಾಳೆತಟ್ಟೆ ತಯಾರಿಕ ಘಟಕಕ್ಕೆ ಶುಭಹಾರೈಸಿದರು.

ಮಾಣಿಲ ಪಂಚಾಯತ್‌ ನ ಮಾಜಿ ಉಪಾಧ್ಯಕ್ಷ ರಾಜೇಶ್‌ ಕುಮಾರ್‌ ಬಾಳೆಕಲ್ಲು ಮಾತನಾಡಿ ’ಸರಕಾರದಿಂದ ಬರುವ ಯೋಜನೆಗಳನ್ನು ಸದುಪಯೋಗ ಮಾಡಿ, ಸ್ವಾವಲಂಬನೆಯ ಬದುಕು ಗ್ರಾಮೀಣ ಮಹಿಳೆಯರದ್ದಾಗಿರಬೇಕು. ಗ್ರಾಮೀಣ ಪ್ರದೇಶದ ಮಹಿಳೆಯವರು ಯಶಸ್ವಿ ಮಹಿಳೆಯರಾಗಿದ್ದುಕೊಂಡು ಈ ಘಟಕವನ್ನು ಇನ್ನಷ್ಟು ಉತ್ತಮ ರೀತಿಯಲ್ಲಿ ಒಗ್ಗಟ್ಟಿನಿಂದ ಮುನ್ನಡೆಸುವಂತೆ ಶುಭಹಾರೈಸಿದರು.

ಸಂಜೀವಿನಿ ಅಭಿಯಾನ ನಿರ್ವಹಣಾ ಘಟಕದ ವಲಯ ಮೇಲ್ವಿಚಾರಕಿ ಶ್ರೀಮತಿ ಕುಸುಮ ಮಾತನಾಡಿ ’ಗ್ರಾಮೀಣ ಪ್ರದೇಶದ ಮಹಿಳೆಯರು ಸ್ವಾವಲಂಬಿಗಳಾಗಿ ನಡೆಸಲು ರೈತ ಉತ್ಪಾದಕರ ಗುಂಪು ತುಂಬಾ ಸಹಕಾರಿ. ಯಾವುದೇ ರೀತಿಯ ಅಂಜರಿಕೆ ಇಲ್ಲದೆ, ಸಮಸ್ಯೆ ಸವಾಲುಗಳನ್ನು ಎದುರಿಸಿ ಯಶಸ್ವಿಯಾಗಿ ಮುನ್ನಡೆಯಿರಿ ಎಂದು ಹಾರೈಸಿದರು.

ನೇತ್ರಾವತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಹೇಮಾವತಿ ಮಾತನಾಡಿ ’ಗ್ರಾಮೀಣ ಪ್ರದೇಶದಲ್ಲಿ ಹಾಳೆತಟ್ಟೆ ತಯಾರಿಕ ಘಟಕವನ್ನು ಸ್ಥಾಪಿಸಿರುವಂತದ್ದು ಸಾಹಸವೇ ಸರಿ, ಶುಭವಾಗಲಿ’ ಎಂದು ಹಾರೈಸಿದರು.

ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘ ಮಾಣಿಲ ಶಾಖೆ ಅಧ್ಯಕ್ಷ ಗೀತಾನಂದ ಶೆಟ್ಟಿ ಮಾಣಿಲ ಗುತ್ತು, ’ಯಾವುದೇ ರೀತಿಯ ಮೈಮನಸ್ಸು, ತಾರತಮ್ಯ ಇಲ್ಲದೆ ಒಮ್ಮತವಿಲ್ಲದ ಮುಂದುವರೆಸಿಕೊಂಡು ಉತ್ತಮವಾಗಿ ನಡೆಸಿಕೊಂಡು ಹೋಗಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮಾಣಿಲ ಪಂಚಾಯತ್‌ ಕಾರ್ಯದರ್ಶಿ ರಾಮನಾಯ್ಕ, ಪಂಚಾಯತ್‌ ಸದಸ್ಯೆ ಮಾಲತಿ ಎನ್‌ ಕೆ, , ನೇತ್ರಾವತಿ ಸಂಜೀವಿನಿ ಒಕ್ಕೂಟದ ಸಿಬ್ಬಂದಿಯವರು, ಮಾಣಿಲ ಪಂಚಾಯತ್‌ ಸಿಬ್ಬಂದಿಗಳು ಉಪಸ್ಥಿತರಿದ್ದರು.

- Advertisement -

Related news

error: Content is protected !!