Tuesday, April 23, 2024
spot_imgspot_img
spot_imgspot_img

ಮಣಿಪಾಲದಲ್ಲಿ ಓರ್ವ ಡ್ರಗ್ಸ್​​​ ಪೆಡ್ಲರ್ ಅರೆಸ್ಟ್.!

- Advertisement -G L Acharya panikkar
- Advertisement -

ಉಡುಪಿ:ಮಣಿಪಾಲದಲ್ಲಿ ನೋಯ್ಡಾ ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಉಡುಪಿ ಪೊಲೀಸರು ಓರ್ವ ಡ್ರಗ್ಸ್​ ಪೆಡ್ಲರ್​ನನ್ನು ಬಂಧಿಸಿದ್ದಾರೆ.

20 ವರ್ಷದ ಹಿಮಾಂಶು ಜೋಷಿ ಬಂಧಿತ ಆರೋಪಿ. ಈತ ಮಣಿಪಾಲ ಎಂಐಟಿ ಕಾಲೇಜಿನ ಇನ್‌ಸ್ಟ್ರುಮೆಂಟೇಶನ್ ಆ್ಯಂಡ್ ಕಂಟ್ರೋಲ್ ವಿಭಾಗದ 7ನೇ ಸೆಮಿಸ್ಟರ್‌ನ ವಿದ್ಯಾರ್ಥಿಯಾಗಿದ್ದಾನೆ.ಈತನ ವಿಚಾರಣೆ ವೇಳೆ ಮಣಿಪಾಲ ಪೊಲೀಸರೇ ದಂಗಾಗಿದ್ದಾರೆ. ಡಾರ್ಕ್ ನೆಟ್​ಗಳನ್ನು ಬಳಸಿ ವಿದೇಶಗಳಿಂದ ಕೊರಿಯರ್ ತರಿಸಿಕೊಂಡ ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ಬರೋಬ್ಬರಿ 498 ಎಂಡಿಎಂಎ (ನಿಷೇಧಿತ ನಿದ್ರಾಜನಕ) ಮಾತ್ರೆಗಳನ್ನು ಈತನಿಂದ ವಶಪಡಿಸಿಕೊಳ್ಳಲಾಗಿದೆ.

ಕೆಲವು ದಿನಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿ ಅಕ್ರಮವಾಗಿ ಆನ್‌ಲೈನ್ ಮೂಲಕ ಎಂಡಿಎಂಎ ಮಾತ್ರೆಗಳನ್ನು ತರಿಸಿ, ಮಣಿಪಾಲದ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಡ್ರಗ್ಸ್​ ಜಾಲವನ್ನು ಬೇಧಿಸಲಾಗಿತ್ತು. ಇದರ ಮುಂದುವರೆದ ಭಾಗವಾಗಿ ಈ ಕಾರ್ಯಾಚರಣೆ ನಡೆದಿರುವ ಸಾಧ್ಯತೆಯೂ ಇದೆ. ಸದ್ಯ ಓರ್ವ ಆರೋಪಿ ಸಿಕ್ಕಿದ್ದು, ಮತ್ತೋರ್ವನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ದಂಧೆಯಲ್ಲಿ ಇನ್ನಷ್ಟು ಜನರಿರುವ ಸಾಧ್ಯತೆಗಳಿದ್ದು, ಪೊಲೀಸರು ಆರೋಪಿಯನ್ನು ಮೂರು ದಿನಗಳ ಕಾಲ ಕಸ್ಟಡಿಗೆ ಪಡೆದು ತನಿಖೆ ತೀವ್ರಗೊಳಿಸಿದ್ದಾರೆ.

- Advertisement -

Related news

error: Content is protected !!