Wednesday, April 23, 2025
spot_imgspot_img
spot_imgspot_img

ಮಣಿಪಾಲ: ಮಾದಕ ವಸ್ತು ಸೇವನೆ ಆರೋಪ; ಮೂವರು ಆರೋಪಿಗಳ ಬಂಧನ..!

- Advertisement -
- Advertisement -

ಮಣಿಪಾಲ: ಲಾಡ್ಜ್ ಒಂದರಲ್ಲಿ ಮಾದಕ ವಸ್ತು ಸಹಿತ ಮೂವರನ್ನು ಪೊಲೀಸರು ಬಂಧಿಸಿರುವ ಘಟನೆ ಮಣಿಪಾಲಸ 80 ಬಡಗಬೆಟ್ಟು ಗ್ರಾಮದ ದಶರಥ ನಗರದಲ್ಲಿ ನಡೆದಿದೆ.

ಬಂದಧಿತ ಆರೋಪಿಗಳನ್ನು ಕಾಪುವಿನ ಮಂಚಕಲ್ ಅಜರುದ್ದೀನ್, ಮಹಾರಾಷ್ಟ್ರದ ಪುಣೆಯ ರಾಜೇಶ್ ಪ್ರಕಾಶ್ ಜಾದವ್, ಮತ್ತು ಮಲ್ಪೆಯ ನಾಜೀಲ್ (ಆಶಿಪ್) ಎಂದು ಗುರುತಿಸಲಾಗಿದೆ.

ಮಾದಕವಸ್ತುವನ್ನು ತೆಗೆದುಕೊಳ್ಳಲು ಉಪಯೋಗಿಸುವ ಸಿರಿಂಜ್‌ಗಳನ್ನು ಹೊಂದಿದ ಬಗ್ಗೆ ಬಂದ ಮಾಹಿತಿ ಆಧರಿಸಿ ಮಣಿಪಾಲ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

40 ಸಾವಿರ ರೂ ಮೌಲ್ಯದ 13.70ಗ್ರಾಂ ತೂಕದ MDMA, 10,500 ರೂ ಮೌಲ್ಯದ 225 ಗ್ರಾಂ ಗಾಂಜಾ, ಪ್ಲಾಸ್ಟಿಕ್ ಕವರ್ ಗಳು, 5 ಸಿರಿಂಜ್‌ಗಳು ಹಾಗೂ ಮೊಬೈಲ್‌ಗಳು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.

- Advertisement -

Related news

error: Content is protected !!