ಬಂಟ್ವಾಳ : ದಿನಾಂಕ 02-03-2024ನೇ ಶನಿವಾರ ಬಂಟ್ವಾಳ ತಾಲೂಕು ನಾವೂರು ಗ್ರಾಮದ ಕೂಡಿಬೈಲು ಎಂಬಲ್ಲಿ ಶ್ರೀ ಬಿ. ರಮಾನಾಥ ರೈ ರವರ ಗೌರವಾಧ್ಯಕ್ಷತೆಯಲ್ಲಿ ತುಳುನಾಡಿನ ಪುರಾತನ ಜಾನಪದ ಕ್ರೀಡೆಗಳಲ್ಲೊಂದಾದ 13ನೇ ವರ್ಷದ ಹೊನಲು ಬೆಳಕಿನ “ಮೂಡೂರು-ಪಡೂರು” ಜೋಡುಕರೆ ಬಯಲು ಕಂಬಳ ಜರಗಲಿರುವುದು.
ದಿನಾಂಕ 02-03-2024ನೇ ಶನಿವಾರ ಬೆಳಗ್ಗೆ ಗಂಟೆ 8:45 ಕ್ಕೆ ಮೂಡೂರು-ಪಡೂರು ಜೋಡುಕರೆ ಕಂಬಳದ ಉದ್ಘಾಟನೆಯು ಶ್ರೀ ವಿಖ್ಯಾತಾನಂದ ಸ್ವಾಮೀಜಿ ಪೀಠಾಧಿಪತಿಗಳು, ಕರ್ನಾಟಕ ಆರ್ಯ ಈಡಿಗ ಮಹಾ ಸಂಸ್ಥಾನ, ಸೋಲೂರು, ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲ ಅರಸರು ಆಳದಂಗಡಿ ಅರಮನೆ,ವಂದನೀಯ ಫೆಡ್ರಿಕ್ ಮೊಂತರೊ ಧರ್ಮಗುರುಗಳು, ಸಂತ ಅಂತೋನಿ ಧರ್ಮ ಕೇಂದ್ರ, ಅಲ್ಲಿಪಾದೆ ಇವರುಗಳ ದಿವ್ಯಹಸ್ತದಲ್ಲಿ ನೆರವೇರಲಿದೆ. ಬಿ. ರಮಾನಾಥ ರೈ, ಮಾಜಿ ಸಚಿವರು, ಉಪಾಧ್ಯಕ್ಷರು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಇವರ ಅಧ್ಯಕ್ಷತೆಯಲ್ಲಿ ಜರಗುವ ಈ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.
ಕೋಣಗಳ ಯಜಮಾನರು ಕೋಣಗಳ ಜೊತೆಗೆ ಹಾಗೂ ಕಂಬಳಾಭಿಮಾನಿಗಳೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.