- Advertisement -
- Advertisement -



ಕೇಪು: ಕೇಪು ಗ್ರಾಮದ ಚೆಲ್ಲಡ್ಕ ಮನೆಯಲ್ಲಿ ವರ್ಷಂಪ್ರತಿ ನಡೆಯುವ ನೇಮೋತ್ಸವವು ಮಾರ್ಚ್ 2 ರಂದು ನಡೆಯಲಿದೆ.
ಮಾರ್ಚ್ 1 ರಂದು ಚೆಲ್ಲಡ್ಕ ತರವಾಡು ಮನೆಯಿಂದ ಭಂಡಾರವೇರಿ ಮರುದಿನ ಮಾರ್ಚ್ 2 ರಂದು ಚೆಲ್ಲಡ್ಕ ದೈವಸ್ಥಾನದಲ್ಲಿ ಕಡ್ತಲೆ ಧೂಮವತಿ, ಅಂಗಡಿ ಧೂಮವತಿ ಮತ್ತು ಸಂಜೆ ಮನೆಯಲ್ಲಿ ಕೊರತಿ ದೈವಗಳ ನೇಮೋತ್ಸವ ನಡೆಯಲಿದೆ. ರಾತ್ರಿ 10 ಗಂಟೆಗೆ ಕುಪ್ಪೆ ಪಂಜುರ್ಲಿ ದೈವದ ಕೋಲ ನಡೆಯಲಿದೆ.
ಮಾರ್ಚ್ 1 ರಂದು ಸಂಜೆ 7 ಗಂಟೆಗೆ ಗಾನ ವೈಭವ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಮಾಜದ ಬಂಧುಗಳು ಭಾಗವಹಿಸುವಂತೆ ಚೆಲ್ಲಡ್ಕ ತರವಾಡು ಮನೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -