Monday, July 7, 2025
spot_imgspot_img
spot_imgspot_img

ತಾಯಿಗೆ ಪರಪುರಷನೊಂದಿಗೆ ಲವ್ವಿಡವ್ವಿ..! ಇದನ್ನರಿತ ಮಗಳು ಮಾಡಿದ್ದು ಮಾಸ್ಟರ್ ಪ್ಲ್ಯಾನ್.?

- Advertisement -
- Advertisement -

ತಾಯಿಗೆ 42 ವರ್ಷ ಪ್ರಾಯದ ವ್ಯಕ್ತಿಯೊಂದಿಗೆ ಪ್ರೇಮಾಂಕುರಗೊಂಡಿತ್ತು. ಇಬ್ಬರೂ ಚಾಟ್ ಮಾಡ್ತಾ ಇದ್ರು. ಈ ವಿಷಯ ಮಗಳಿಗೆ ತಿಳಿದಿದೆ. ವಿಷಯ ಗೊತ್ತಾಗುತ್ತಿದ್ದಂತೆ ಹಣ ದಾಹ ತೀರಿಸಿಕೊಳ್ಳಲು ಯುವತಿ ಮಾಸ್ಟರ್ ಪ್ಲಾನ್ ಮಾಡಿದ್ದಾಳೆ. ಆಕೆ ಹೆಣೆದ ಬಲೆಗೆ ಈಗ ಆಕೆಯೇ ಸಿಕ್ಕಿ ಬಿದ್ದು ಪೊಲೀಸರ ಅತಿಥಿಯಾಗಿದ್ದಾಳೆ.ಪುಣೆಯಲ್ಲಿ ಈ ಘಟನೆ ನಡೆದಿದೆ.

ತನ್ನ ತಾಯಿಯ ಸ್ಮಾರ್ಟ್ಫೋನ್‌ನಲ್ಲಿ ವಾಟ್ಸಾಪ್ ಚಾಟ್ ಹುಡುಕಾಡುತ್ತಿದ್ದ ಯುವತಿಗೆ 42 ವರ್ಷದ ವ್ಯಕ್ತಿಯ ಪ್ರೇಮ ಸಲ್ಲಾಪದ ಸಂದೇಶಗಳು ಪತ್ತೆಯಾಗಿದ್ದವು. ಇದರಿಂದ ಯುವತಿಗೆ ಆ ವ್ಯಕ್ತಿಯಿಂದ ಹಣ ಬಾಚಿಕೊಳ್ಳುವ ದುರುದ್ದೇಶ ಮೂಡಿತ್ತು. ತಾಯಿಗೆ ತಿಳಿಯದಂತೆ ಸಂದೇಶಗಳನ್ನು ಟ್ರಾನ್ಸ್ಫರ್ ಮಾಡಿಕೊಂಡು, ತನ್ನ ಆಪ್ತ ಸ್ನೇಹಿತರೊಂದಿಗೆ ಸೇರಿಕೊಂಡು ಯುವತಿಯು ವ್ಯಕ್ತಿಯನ್ನು ಹಣಕ್ಕಾಗಿ ಬೆದರಿಸಲು ಶುರು ಮಾಡಿದ್ದಳು. ಮಾಡಿದ ತಪ್ಪಿಗೆ ಹೆದರಿದ್ದ ಆತ 2.6 ಲಕ್ಷ ರೂ. ಕೊಟ್ಟು ಬಚಾವಾಗಲು ಯತ್ನಿಸಿದ್ದ.

ಹೆಚ್ಚು ಹಣಕ್ಕಾಗಿ ಯುವತಿಯ ಗ್ಯಾಂಗ್ ನಿತ್ಯ ಪೀಡಿಸಲು ಶುರು ಮಾಡಿದಾಗ 42 ವರ್ಷದ ವ್ಯಕ್ತಿ ಅನಿವಾರ್ಯವಾಗಿ ಪೊಲೀಸರ ಮೊರೆಹೋದರು. ಪುಣೆ ನಗರ ಘಟಕದ ವಸೂಲಿ ತಡೆ ವಿಭಾಗದ ಪೊಲೀಸರ ತಂಡ ಯುವತಿಯ ಗ್ಯಾಂಗ್ ಬೆನ್ನತ್ತಿ ಎಲ್ಲರನ್ನು ಬಂಧಿಸಿ ಜೈಲಿಗಟ್ಟಿದೆ. 1 ಲಕ್ಷ ರೂ. ನೀಡುವ ಆಮಿಷ ತೋರಿಸಿದ ವ್ಯಕ್ತಿಯು, ಪೊಲೀಸರು ಹೇಳಿದ ಜಾಗಕ್ಕೆ ಯುವತಿಯ ಗ್ಯಾಂಗ್ ಅನ್ನು ಕರೆಸಿಕೊಂಡಿದ್ದ. ಈ ವೇಳೆ ಸ್ಥಳ ಸುತ್ತುವರಿದಿದ್ದ ಪೊಲೀಸರು ವಸೂಲಿಕೋರರ ಮೇಲೆ ಎರಗಿ ಅವರನ್ನು ಹಣದ ಸಮೇತರಾಗಿ ಬಂಧಿಸಿದ್ದಾರೆ.

- Advertisement -

Related news

error: Content is protected !!