Saturday, June 28, 2025
spot_imgspot_img
spot_imgspot_img

ಕರಾವಳಿಯಲ್ಲಿ ಮೇ. 19 ರವರೆಗೆ ಎಲ್ಲೋ ಅಲರ್ಟ್..!

- Advertisement -
- Advertisement -

ಮಂಗಳೂರು: ಭಾರತೀಯ ಹವಾಮಾನ ಇಲಾಖೆಯು ಮೇ 16ರಿಂದ 19ರ ವರೆಗೆ ಕರಾವಳಿಯಲ್ಲಿ ಎಲ್ಲೋ ಅಲರ್ಟ್‌ ಘೋಷಿಸಿದೆ.ಈ ವೇಳೆ ಗುಡುಗು ಸಿಡಿಲಿನಿಂದ ಕೂಡಿದ ಮಳೆಯಾಗುವ ನಿರೀಕ್ಷೆ ಇದೆ.

ಇನ್ನೊಂದೆಡೆ ಅರಬ್ಬೀ ಸಮುದ್ರದ ದಕ್ಷಿಣ ಹಾಗೂ ಪೂರ್ವ ಭಾಗದ ನಡುವಿನ ಆಗ್ನೇಯ ದಿಕ್ಕಿನಲ್ಲಿ ದೊಡ್ಡ ಪ್ರಮಾಣದ ಸುಳಿಗಾಳಿಯೊಂದು ಆರಂಭವಾಗಿದ್ದು, ಈ ಸುಳಿಗಾಳಿಯು ಪ್ರಸ್ತುತ ಕೇರಳ ತೀರದಿಂದ ಮರಾಠವಾಡದ ಕಡೆಗೆ ಚಲಿಸುತ್ತಿದ್ದು, ಇದರ ಪರಿಣಾಮ ಮುಂದಿನ ಒಂದು ವಾರದವರೆಗೆ ರಾಜ್ಯದ ಕರಾವಳಿ, ಮಲೆನಾಡು ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ (ಕೆಎಸ್ಎನ್ ಡಿಎಂಸಿ) ಮುನ್ನೆಚ್ಚರಿಕೆ ನೀಡಿದೆ.

ಬೆಳ್ತಂಗಡಿ ತಾಲೂಕಿನ ಹಲವು ಕಡೆ, ಕುಕ್ಕೆ ಸುಬ್ರಹ್ಮಣ್ಯ ಸಹಿತ ಹಲವು ಕಡೆ ಗಳಲ್ಲಿ ಬುಧವಾರ ಉತ್ತಮ ಮಳೆ ಯಾಗಿದೆ. ಮಂಗಳೂರು ಸಹಿತ ಹಲವು ಕಡೆ ಮೋಡದಿಂದ ಕೂಡಿದ ವಾತಾವರಣ ಇತ್ತು. ಮಂಗಳೂರಿನಲ್ಲಿ 33.4 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ 0.5 ಡಿ.ಸೆ. ಕಡಿಮೆ, 25 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.1 ಡಿ.ಸೆ. ಕಡಿಮೆ ದಾಖಲಾಗಿತ್ತು.

- Advertisement -

Related news

error: Content is protected !!