Friday, April 19, 2024
spot_imgspot_img
spot_imgspot_img

ಊಟ ಆರ್ಡರ್ ‌ಮಾಡಿ 50 ಸಾವಿರ ರೂ. ಕಳೆದುಕೊಂಡ ಮಹಿಳೆ!!

- Advertisement -G L Acharya panikkar
- Advertisement -

ಬೆಂಗಳೂರು: ಫೇಸ್ಬುಕ್’ನಲ್ಲಿ ಜಾಹೀರಾತು ನೋಡಿ ಊಟ ಆರ್ಡರ್ ‌ಮಾಡಿ ಮಹಿಳೆಯೊಬ್ಬರು 50 ಸಾವಿರ ರೂ.ಗಳನ್ನು ಕಳೆದುಕೊಂಡ ಘಟನೆ ನಡೆದಿದೆ.

ಬೆಂಗಳೂರಿನ ಯಲಚೇನಹಳ್ಳಿ ನಿವಾಸಿ ಸವಿತಾ ಶರ್ಮಾ( 58) ಫೇಸ್ಬುಕ್’ನಲ್ಲಿ 250ರೂ.ಗಳ ಒಂದು ಊಟಕ್ಕೆ 2ಊಟ ಉಚಿತ ಎನ್ನುವ ಜಾಹೀರಾತು ನೋಡಿ ಕರೆ ಮಾಡಿ ಊಟವನ್ನು ಆರ್ಡರ್ ಮಾಡಿದ್ದರು. ಊಟವನ್ನು ಮುಂಗಡ ಕಾಯ್ದಿರಿಸಲು 10ರೂ.ಗಳನ್ನು ಕೊಡಿ ನಂತರ ಮನೆಗೆ ಊಟ ಬಂದ ಮೇಲೆ ಪೂರ್ತಿ ಹಣ ಪಾವತಿಸಿ ಎಂದು ಆರ್ಡರ್ ಪಡೆದ ವ್ಯಕ್ತಿ ಹೇಳಿದ್ದರು.

ಅದಕ್ಕಾಗಿ ಫಾರ್ಮ್ ಅನ್ನು ತುಂಬಬೇಕು ಎಂದು ಮೊಬೈಲ್ ಗೆ ಲಿಂಕ್ ಕಳುಹಿಸಲಾಗಿತ್ತು. ಲಿಂಕ್ ಓಪನ್ ಮಾಡಿದ ಸವಿತಾ ಅದರಲ್ಲಿ ತಮ್ಮ ಡೆಬಿಟ್ ಕಾರ್ಡ್ ವಿವರಗಳನ್ನು ಮತ್ತು ಪಿನ್ ಸಂಖ್ಯೆಯನ್ನು ಹಂಚಿಕೊಂಡಿದ್ದರು. ಕೆಲವೇ ನಿಮಿಷಗಳಲ್ಲಿ 49,996 ರೂ.ಗಳನ್ನು ಆಕೆಯ ಖಾತೆಯಿಂದ ತೆಗೆಯಲಾಗಿದೆ ಎಂದು ಸಂದೇಶ ಬಂದಿತ್ತು. ಇದರಿಂದ ಗಾಬರಿಗೊಂಡ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸೈಬರ್ ಕ್ರೈಮ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

- Advertisement -

Related news

error: Content is protected !!