- Advertisement -
- Advertisement -
ಸುಳ್ಯ:-ಸುಳ್ಯದ ಪತ್ರಿಕೆಯೊಂದರ ಮೂವರು ಪತ್ರಕರ್ತರು ಹಾಗೂ ಸುಳ್ಯ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿಗಳು ಮತ್ತು ಕಡಬದ ಐವರು ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ.
ಸುಳ್ಯದ ಒಬ್ಬರು ಪತ್ರಕರ್ತರಿಗೆ ನಿನ್ನೆ ಕೊರೊನಾ ವರದಿ ಪಾಸಿಟಿವ್ ಬಂದಿತ್ತು. ಆ ಹಿನ್ನಲೆಯಲ್ಲಿ ಇವರ ಪ್ರಾಥಮಿಕ ಸಂಪರ್ಕಿತರಾದ ಅವರ ಕಚೇರಿಯ ಇತರ ಪತ್ರಕರ್ತರು ತಪಾಸಣೆಗೆ ಒಳಗಾದಾಗ ಇನ್ನಿಬ್ಬರಿಗೆ ಕೊರೋನಾ ಸೋಂಕು ಇರುವುದು ಕಂಡು ಬಂತು. ನಿನ್ನೆ ಸೋಂಕು ಕಂಡು ಬಂದ ಪತ್ರಕರ್ತರು ಅವರ ಮನೆಯಲ್ಲೇ ಕ್ವಾರೆಂಟೈನ್‌ನಲ್ಲಿದ್ದು, ಇಂದು ಪಾಸಿಟಿವ್ ಬಂದ ಇಬ್ಬರು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇನ್ನು ಸುಳ್ಯ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿಗಳು ಜಾಲ್ಸೂರಿನಲ್ಲಿ ನಡೆದ ಕೊರೋನಾ ರಾಪಿಡ್ ಆಂಟಿಜೆನ್ ಪರೀಕ್ಷೆಯಲ್ಲಿ ತಪಾಸಣೆ ಮಾಡಿದ್ದು ಅವರಿಗೆ ಪಾಸಿಟಿವ್ ಬಂದಿರುವುದಾಗಿ ತಿಳಿದು ಬಂದಿದೆ.ಕಡಬದ ಕೋಡಿಂಬಾಳ ಎಂಬಲ್ಲಿ ಒಂದೇ ಕುಟುಂಬದ ನಾಲ್ವರಿಗೆ ಮತ್ತು ಕಡಬದಲ್ಲಿನ ಒಬ್ಬರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ.
- Advertisement -