Wednesday, May 1, 2024
spot_imgspot_img
spot_imgspot_img

ಬಹೂಪಯೋಗಿ ಶುಂಠಿಯ ಔಷಧೀಯ ಗುಣಗಳು

- Advertisement -G L Acharya panikkar
- Advertisement -

ಅಡುಗೆಯಲ್ಲಿ ಪ್ರಮುಖವಾಗಿ ಬಳಸಲ್ಪಡುವಂತಹ ಶುಂಠಿಯಲ್ಲಿ ಹಲವಾರು ಬಗೆಯ ಔಷಧೀಯ ಗುಣಗಳು ಕೂಡ ಇವೆ. ಇದನ್ನು ಭಾರತೀಯರು ಮಾತ್ರವಲ್ಲದೆ, ವಿಶ್ವದೆಲ್ಲೆಡೆಯಲ್ಲಿ ವಿವಿಧ ರೀತಿಯಿಂದ ಬಳಕೆ ಮಾಡಲಾಗುತ್ತದೆ.

ಆಯುರ್ವೇದದಲ್ಲಿ ಕೂಡ ಶುಂಠಿಯನ್ನು ಔಷಧಿಯಾಗಿ ಬಳಸಲಾಗುತ್ತಿದೆ. ಶುಂಠಿಯು ಕೆಲವೊಂದು ಬ್ಯಾಕ್ಟೀರಿಯಾ ಸೋಂಕು, ಶಿಲೀಂಧ್ರ ಸೋಂಕನ್ನು ದೂರ ಮಾಡುವುದು. ಇದನ್ನು ಔಷಧಿಯಾಗಿ ಬಳಕೆ ಮಾಡಲು ತಯಾರಿಸುವಂತಹ ಆಹಾರಕ್ಕೆ ಬಳಕೆ ಮಾಡಿದರೂ ಒಳ್ಳೆಯದು. ಅದು ಹೇಗೆ ಎಂದು ನಾವು ನಿಮಗೆ ಇಲ್ಲಿ ತಿಳಿಸಿಕೊಡಲಿದ್ದೇವೆ.

ಸಾವಿರಾರು ವರ್ಷಗಳಿಂದಲೂ ಶುಂಠಿಯನ್ನು ಹಲವಾರು ರೀತಿಯ ಚಿಕಿತ್ಸೆಗೆ ಬಳಸಿಕೊಂಡು ಬರಲಾಗುತ್ತಿದೆ. ಇದು ಚಿಕಿತ್ಸಕಕಾರಿ ಮತ್ತು ಪರಿಣಾಮಕಾರಿ ಆಗಿದೆ. ಇದು ಔಷಧಿಯಾಗಿ ಕೆಲಸ ಮಾಡಲು ಯಾವ ಅಂಶಗಳು ಕಾರಣವಾಗುವುದು ಎಂದು ತಿಳಿಯೋಣ. ಉರಿಯೂತ ಶಮನಕಾರಿ, ನೋವು ನಿವಾರಕ, ಆಂಟಿಆಕ್ಸಿಡೆಂಟ್ ಗುಣಗಳು ಇದರಲ್ಲಿ ಇದೆ. ಇದು ಉರಿಯೂತ, ಊತ ಮತ್ತು ನೋವನ್ನು ಕಡಿಮೆ ಮಾಡುವುದು. ಇದು ಸೆರೊಟೊನಿನ್ ನ್ನು ಹೆಚ್ಚಿಸುವುದು ಮತ್ತು ಕರುಳಿನಲ್ಲಿ ಇರುವಂತಹ ಗ್ಯಾಸ್ ನ್ನು ವಿಘಟಿಸುವುದು.ಇದರಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಅಂಶವು ಕ್ಯಾನ್ಸರ್ ಕಾರಕ ಅಂಶಗಳನ್ನು ನಾಶ ಮಾಡುವುದು.ಶುಂಠಿಯಲ್ಲಿ ಇರುವಂತಹ ಅಂಶಗಳು ಅಲರ್ಜಿ ದೂರ ಮಾಡುವುದು.

ಶ್ವಾಸಕೋಶ ಸಮಸ್ಯೆಯನ್ನು ದೂರವಿಡುವುದು. ಶುಂಠಿಯಲ್ಲಿ ಇರುವಂತಹ ಅಲರ್ಜಿ ವಿರೋಧಿ ಗುಣವು ಅಲರ್ಜಿಯನ್ನು ನಿವಾರಣೆ ಮಾಡುವುದು. ಅಸ್ತಮಾ ಮತ್ತು ಬ್ರಾಂಕೈಟಿಸ್ ನ್ನು ದೂರವಿಡುವುದು. ಇದು ವಾಯುನಾಳದ ಸಂಕೋಚನವನ್ನು ತಡೆಯುವುದು ಮತ್ತು ಕಫದ ಸ್ರವಿಸುವಿಕೆ ಉತ್ತೇಜಿಸುವುದು.ಇದು ಶೀತ ಮತ್ತು ಕೆಮ್ಮಿನಂತಹ ಸಮಸ್ಯೆಗಳಿಗೆ ತುಂಬಾ ಪರಿಣಾಮಕಾರಿ ಗಿಡಮೂಲಿಕೆ.

ಒಂದು ಚಮಚ ಶುಂಠಿ ರಸಕ್ಕೆ ಜೇನುತುಪ್ಪ ಹಾಕಿದರೆ ಗಂಟಲಿನ ಊತ ಕಡಿಮೆ ಆಗುವುದು. ಶುಂಠಿ ಟೀ ಕುಡಿದರೆ ಅದರಿಂದ ಗಂಟಲು ಮತ್ತು ಮೂಗು ಕಟ್ಟುವಿಕೆ ಕಡಿಮೆ ಆಗುವುದು. ಶುಂಠಿ ರಸವನ್ನು ಮೆಂತ್ಯೆ ಮತ್ತು ಜೇನುತುಪ್ಪದ ಜತೆಗೆ ಬೆರೆಸಿಕೊಂಡು ಕುಡಿದರೆ ಅಸ್ತಮಾ ಕಡಿಮೆ ಆಗುವುದು

ಶುಂಠಿಯು ವಾಕರಿಕೆಯನ್ನು ಕಡಿಮೆ ಮಾಡುವುದು ಎಂದು ಅಧ್ಯಯನಗಳು ಹೇಳಿವೆ.ಕಿಮೋಥೆರಪಿಯಿಂದಾಗಿ ಕಾಡುವಂತಹ ವಾಕರಿಕೆಯನ್ನು ಇದು ದೂರ ಮಾಡಲು ಪರಿಣಾಮಕಾರಿ. ಸಣ್ಣ ತುಂಡು ಶುಂಠಿ ಜಗಿದರೆ ಅದು ವಾಕರಿಕೆ ಮತ್ತು ವಾಂತಿ ದೂರ ಮಾಡುವುದು. ಶುಂಠಿಯಲ್ಲಿ ಇರುವ ಕಾರ್ಮಿನೇಟಿವ್ ಅಂಶವು ಗರ್ಭಿಣಿಯರಿಗೆ ನೆರವಾಗುವುದು ಮತ್ತು ಇದು ಮಾರ್ನಿಂಗ್ ಸಿಕ್ನೆಸ್ ಸಮಸ್ಯೆಯನ್ನು ದೂರ ಮಾಡುವುದು. ಆದರೆ ನೀವು ಇದರ ಸೇವನೆಗೆ ಮೊದಲು ವೈದ್ಯರ ಸಲಹೆ ಪಡೆಯಿರಿ.

ತಾಜಾ ಶುಂಠಿಯ ಕೆಲವು ತುಂಡುಗಳನ್ನು ನೀವು ಜಗಿಯಿರಿ. ನಿಮಗೆ ಇದು ಹೆಚ್ಚು ಘಾಟು ಇದ್ದರೆ ಆಗ ನೀವು ಇದರ ರಸ ತೆಗೆದು ಸೇವನೆ ಮಾಡಬಹುದು. ಆದರೆ ಒಂದು ಚಮಚಕ್ಕಿಂತ ಹೆಚ್ಚು ಶುಂಠಿ ರಸ ಸೇವನೆ ಮಾಡಬೇಡಿ. ಇದರಿಂದ ಪಿತ್ತದ ಮಟ್ಟವು ಹೆಚ್ಚಾಗುವುದು. ಶುಂಠಿಯು ಜೀರ್ಣಕ್ರಿಯೆಯ ರಸವಾಗಿ ಕೆಲಸ ಮಾಡಿ, ಹಸಿವು ಹೆಚ್ಚಿಸುವುದು. ಊಟಕ್ಕೆ ಮೊದಲು ಒಂದು ತುಂಡು ಶುಂಠಿ ಸೇವನೆ ಮಾಡಿದರೆ ಅದು ಜೀರ್ಣಕ್ರಿಯೆಗೆ ಸಹಕಾರಿ.

- Advertisement -

Related news

error: Content is protected !!