Tuesday, July 1, 2025
spot_imgspot_img
spot_imgspot_img

ಮಹಾ ಲಸಿಕಾ ಅಭಿಯಾನ: ನಿನ್ನೆ ಒಂದೇ ದಿನ 2.5 ಕೋಟಿ ಡೋಸ್: ಕರ್ನಾಟಕಕ್ಕೆ ದ್ವೀತಿಯ ಸ್ಥಾನ

- Advertisement -
- Advertisement -

ಕೊರೊನಾ ಸೋಂಕು ತಡೆಗಟ್ಟಲು ಕೇಂದ್ರ ಸರ್ಕಾರದ ಮಹಾ ಲಸಿಕಾ ಅಭಿಯಾನಕ್ಕೆ ಭರ್ಜರಿ ಪ್ರೋತ್ಸಾಹ ಸಿಗುತ್ತಿದ್ದು ನಿನ್ನೆ ಒಂದೇ ದಿನ 2.5 ಕೋಟಿ ಡೋಸ್ ಭಾರತದಾದ್ಯಂತ ನೀಡಲಾಗಿದೆ. ಮೆಗಾ ವ್ಯಾಕ್ಸಿನೇಷನ್ ಅಭಿಯಾನದ ಸಮಯದಲ್ಲಿ 27,80,032 ಕೋವಿಡ್ -19 ಲಸಿಕೆ ಪ್ರಮಾಣವನ್ನು ರಾತ್ರಿ 9.30 ರೊಳಗೆ ನೀಡುವ ಮೂಲಕ ಕರ್ನಾಟಕ ಲಸಿಕೆ ಹಾಕುವಲ್ಲಿ ಹೊಸ ದಾಖಲೆ ನಿರ್ಮಿಸಿದೆ.

ಬಿಹಾರದಲ್ಲಿ 29,38,653 ಡೋಸ್ ಕೊರೊನಾ ಲಸಿಕೆ ನೀಡಿ ಪ್ರಥಮ ಸ್ಥಾನದಲ್ಲಿದ್ದು, 27,80,032 ಡೋಸ್ ಲಸಿಕೆ ನೀಡಿರುವ ಕರ್ನಾಟಕ ಎರಡನೇ ಸ್ಥಾನ ಪಡೆದುಕೊಂಡಿದೆ. ಬೆಂಗಳೂರು ನಗರ, ಶಿವಮೊಗ್ಗ, ಧಾರವಾಡ, ರಾಮನಗರ, ಹಾಸನ, ದಾವಣಗೆರೆ, ಚಿಕ್ಕಮಗಳೂರು ಮತ್ತು ಹಾವೇರಿ ಜಿಲ್ಲೆಗಳು ದಿನದ ಗುರಿಯ ಶೇ. 100 ಸಾಧಿಸಿದೆ.

- Advertisement -

Related news

error: Content is protected !!