Friday, October 11, 2024
spot_imgspot_img
spot_imgspot_img

ಮೆಸ್ಕಾಂ ಗುತ್ತಿಗೆ ಮೀಟರ್ ರೀಡರ್ಸ್ ಗಳ ಸಮಸ್ಯೆಗೆ ಸ್ಪಂದಿಸದ ಮೆಸ್ಕಾಂ: ಮೆಸ್ಕಾಂ ಕಚೇರಿಯ ಮುಂಭಾಗದಲ್ಲಿ ಮೀಟರ್ ರೀಡರ್ಸ್ ಗಳ ಪ್ರತಿಭಟನೆ

- Advertisement -
- Advertisement -

ಬಂಟ್ವಾಳ: ಮೀಟರ್ ರೀಡಿಂಗ್‌ನ ಗುತ್ತಿಗೆಯನ್ನು ಅತಿ ಕಡಿಮೆ ದರಕ್ಕೆ ನೀಡಿ ಮೆಸ್ಕಾಂ ಮೀಟರ್ ರೀಡರ್‌ಗಳನ್ನು ಮೆಸ್ಕಾಂ ಕಡಿಮೆ ವೇತನಕ್ಕೆ ದುಡಿಸುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿ ಹಾಗೂ ಮೀಟರ್ ರೀಡರ್‌ಗಳು ತಡೆ ಹಿಡಿದಿರುವ ವೇತನ ಬಿಡುಗಡೆಗೆ ಬಂಟ್ವಾಳ ಹಾಗೂ ಬೆಳ್ತಂಗಡಿ ತಾಲೂಕಿನ ಮೀಟರ್ ರೀಡರ್‌ಗಳು ಬಿ.ಸಿ.ರೋಡಿನ ಮೆಸ್ಕಾಂ ಕಚೇರಿಯ ಮುಂಭಾಗದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.


ಪ್ರತಿಭಟನೆಯನ್ನುದ್ದೇಶಿಸಿ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ಮಾತನಾಡಿ, ಶಾಸಕರು, ಸಂಸದರು, ಸಚಿವರು ಚುನಾವಣೆಯ ಸಂದರ್ಭದಲ್ಲಿ ಮೆಸ್ಕಾಂ ಮೀಟರ್ ರೀಡರ್‌ಗಳ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡುತ್ತಿದ್ದು, ಆದರೆ ಗೆದ್ದ ಬಳಿಕ ಯಾವುದನ್ನೂ ಮಾಡುತ್ತಿಲ್ಲ. ಮೀಟರ್ ರೀಡಿಂಗ್‌ನ ಹಿಂದಿನ ಗುತ್ತಿಗೆಯ ಬದಲು ಪ್ರಸ್ತುತ ಕಡಿಮೆ ಗುತ್ತಿಗೆಯ ಮೂಲಕ ಮೀಟರ್ ರೀಡರ್‌ಗಳ ವೇತನವನ್ನು ಕಡಿಮೆಗೊಳಿಸುವ ಹುನ್ನಾರ ನಡೆಸುತ್ತಿದೆ. ಜತೆಗೆ ಹಿಂದಿನ ವೇತನವನ್ನೂ ತಡೆ ಹಿಡಿದಿದೆ ಎಂದು ಆರೋಪಿಸಿದರು.


ನಮ್ಮ ಬೇಡಿಕೆ ಈಡೇರುವವರೆಗೆ ಮೀಟರ್ ರೀಡಿಂಗ್ ಮೆಷಿನನ್ನು ಮೆಸ್ಕಾಂಗೆ ನೀಡುವುದಿಲ್ಲ, ಮುಂದೆ ಬೇಡಿಕೆ ಈಡೇರದೇ ಇದ್ದರೆ ದೊಡ್ಡ ಮಟ್ಟದ ಹೋರಾಟ ನಡೆಸಲಿದ್ದೇವೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಮೆಸ್ಕಾಂ ಇಇ ಅವರ ಮೂಲಕ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಪ್ರಮುಖರಾದ ಗೋಪಾಲ ನೇರಳಕಟ್ಟೆ, ಜಯರಾಮ್ ಬಂಟ್ವಾಳ, ಗೋಪಾಲಕೃಷ್ಣ ಬಂಟ್ವಾಳ, ಸದಾಶಿವ ಬಂಟ್ವಾಳ, ಮೋನಪ್ಪ ಬೆಳ್ತಂಗಡಿ, ರಮೇಶ್ ಬೆಳ್ತಂಗಡಿ, ಉದಯಕುಮಾರ್ ವಿಟ್ಲ ಪಾಲ್ಗೊಂಡಿದ್ದರು.

- Advertisement -

Related news

error: Content is protected !!