Tuesday, September 28, 2021
spot_imgspot_img
spot_imgspot_img

ಜನರ ಕೈ ಸುಡಲಿರುವ ಹಾಲಿನ ಬೆಲೆ..!!

- Advertisement -
- Advertisement -

ಒಂದು ಕಡೆ ಗಗನಕ್ಕೇರಿದ ಪೆಟ್ರೋಲ್-ಡಿಸೇಲ್ ಬೆಲೆಯಾದರೆ ಇದರ ಮಧ್ಯೆ ಜನಸಾಮಾನ್ಯರಿಗೆ ಇನ್ನೊಂದು ಶಾಕ್ ಕಾದಿದೆ. ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳಲಿದೆ. ಹಾಲಿನ ದರದಲ್ಲಿ ಏರಿಕೆ ಕಂಡು ಬಂದಿದ್ದು, ಅಮೂಲ್ ಕಂಪನಿ ಹಾಲಿನ ಬೆಲೆ ಏರಿಕೆಗೆ ಮುಂದಾಗಿದೆ. ಅಮೂಲ್ ಹಾಲಿನ ಬೆಲೆ ಲೀಟರ್‌ಗೆ ಎರಡು ರೂಪಾಯಿ ಹೆಚ್ಚಾಗಿದ್ದು, ಜುಲೈ ಒಂದರಿ0ದ ಹಾಲಿನ ಬೆಲೆಯಲ್ಲಿ ಏರಿಕೆ ಕಂಡು ಬರಲಿದೆ.

ಮಾಹಿತಿ ಪ್ರಕಾರ, ರಾಷ್ಟ್ರ ರಾಜಧಾನಿ ದೆಹಲಿ, ಗುಜರಾತ್ ಮತ್ತು ಪಂಜಾಬ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಮೂಲ್ ಹಾಲಿನ ಹೊಸ ಬೆಲೆಗಳು ಅನ್ವಯವಾಗಲಿವೆ. ಕಂಪನಿಯು ತನ್ನ ಎಲ್ಲಾ ಬ್ರಾಂಡ್‌ಗಳ ಬೆಲೆಯನ್ನು ಲೀಟರ್‌ಗೆ 2 ರೂಪಾಯಿ ಹೆಚ್ಚಿಸಿದೆ. ಅಮೂಲ್‌ನ ಹಾಲಿನ ಉತ್ಪನ್ನಗಳಾದ ಅಮೂಲ್ ಗೋಲ್ಡ್, ಅಮೂಲ್ ಶಕ್ತಿ, ಅಮೂಲ್ ತಾಜಾ, ಅಮೂಲ್ ಟಿ-ಸ್ಪೆಷಲ್, ಅಮೂಲ್ ಸ್ಲಿಮ್ ಬೆಲೆ ಪ್ರತಿ ಲೀಟರ್‌ಗೆ 2 ರೂಪಾಯಿ ಹೆಚ್ಚಾಗಲಿದೆ. ಅಮೂಲ್ ಗೋಲ್ಡ್ ಬೆಲೆ ಲೀಟರ್‌ಗೆ 58 ರೂಪಾಯಿಗೆ ಸಿಗಲಿದೆ.

ವೆಚ್ಚ ಹೆಚ್ಚಾಗ್ತಿದ್ದಂತೆ ಹಾಲಿನ ಬೆಲೆಯನ್ನು ಹೆಚ್ಚಿಸಲು ಕಂಪನಿ ನಿರ್ಧರಿಸಿದೆ. ಕೊರೊನಾ ಹಿನ್ನೆಲೆಯಲ್ಲಿ ಇನ್ನೂ ಕೆಲ ಹಾಲು ವ್ಯಾಪಾರಿಗಳು ಹಾಲಿನ ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಿದ್ದಾರೆ.

- Advertisement -
- Advertisement -

MOST POPULAR

HOT NEWS

Related news

error: Content is protected !!