Sunday, October 6, 2024
spot_imgspot_img
spot_imgspot_img

ವಿಟ್ಲ: ಸಂಘಕ್ಕೆ ಹಣ ಕಟ್ಟಲೆಂದು ಮನೆಯಿಂದ ಹೋದ ವ್ಯಕ್ತಿ ನಾಪತ್ತೆ : ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

- Advertisement -
- Advertisement -

ವಿಟ್ಲ: ವಿಟ್ಲ ಕಸಬಾ ಗ್ರಾಮದ ನೆಕ್ಕಿಲಾರು ಎಂಬಲ್ಲಿನ ವ್ಯಕ್ತಿಯೋರ್ವರು ಸಂಘಕ್ಕೆ ಹಣ ಕಟ್ಟಲೆಂದು ಮನೆಯಿಂದ ಹೋದವರು ಮನೆಗೆ ಬಾರದೇ ನಾಪತ್ತೆಯಾಗಿರುವ ಘಟನೆ ನಡೆದಿದೆ.

ನಾಪತ್ತೆಯಾದ ವ್ಯಕ್ತಿಯನ್ನು ಹೇಮಂತ್ ( 37 ವರ್ಷ) ಎಂದು ಗುರುತಿಸಲಾಗಿದೆ.

ಹೇಮಂತ್ ಎಂಬವರು ದಿನಾಂಕ:22-07-2024 ರಂದು ಬೆಳಿಗ್ಗೆ 6- 00 ಗಂಟೆಗೆ ನೆಕ್ಕಿಲಾರು ಮನೆಯಿಂದ ಸಂಘಕ್ಕೆ ಹಣ ಕಟ್ಟಲು ಹೋದವರು ಮನೆಗೆ ಬಾರದೇ ಇದ್ದು ಅವರ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಎಂದು ಬರುತ್ತದೆ. ಸಂಬಂಧಿಕರಲ್ಲಿ ವಿಚಾರಿಸಿದಾಗ ಎಲ್ಲಿಯೂ ಹೇಮಂತ್ ಪತ್ತೆಯಾಗಿಲ್ಲ.
ಹೇಮಂತ್ ರವರು 5 ವರೆ ಅಡಿ ಎತ್ತರವಿದ್ದು, ಕನ್ನಡ ,ತುಳು ಭಾಷೆ ಮಾತನಾಡುತ್ತಾರೆ ,ಗೋಧಿ ಮೈ ಬಣ್ಣ ,ಬಿಳಿ ಬಣ್ಣದ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ

- Advertisement -

Related news

error: Content is protected !!