Sunday, June 29, 2025
spot_imgspot_img
spot_imgspot_img

ನಾಪತ್ತೆಯಾಗಿದ್ದ ಖಾಸಗಿ ಶಾಲೆಯ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಪತ್ತೆ

- Advertisement -
- Advertisement -

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ಖಾಸಗಿ ಶಾಲೆಯ ನಾಪತ್ತೆಯಾಗಿದ್ದ ಆರು ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಪತ್ತೆಯಾಗಿರುವ ಘಟನೆ ವರದಿಯಾಗಿದೆ.

ಡೀಮ್ ವರ್ಡ್ ಇಂಟರ್ ನ್ಯಾಷನಲ್ ಸ್ಕೂಲ್‌ ನಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ 6 ವಿದ್ಯಾರ್ಥಿಗಳಾದ ಶ್ರೇಯಸ್, ಧನುಷ್, ಮನು, ತರುಣ್, ಸಿದ್ದೇಶ್ ಹಾಗೂ ಯಶಸ್ ನಾಪತ್ತೆಯಾಗಿದ್ದರು.

ಈ ಆರು ಜನ ವಿದ್ಯಾರ್ಥಿಗಳು, ಶಾಲೆಯ ವಸತಿ ಶಾಲೆಯಲ್ಲಿದ್ದರು. ಆದರೆ ಇಂದು ಬೆಳಗ್ಗೆಯಿಂದ ನಾಪತ್ತೆಯಾಗಿದ್ದರು. ಈ ಕುರಿತು ಹೊಳಲ್ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ವಿದ್ಯಾರ್ಥಿಗಳಿಗಾಗಿ ಹುಡುಕಾಟ ನಡೆಸಿದರು.
ಇದೀಗ ನಾಪತ್ತೆಯಾಗಿದ್ದ 6ಜನ ವಿದ್ಯಾರ್ಥಿಗಳು ಬೆಂಗಳೂರಲ್ಲಿ ಪತ್ತೆಯಾಗಿದ್ದಾರೆ. ಶ್ರೇಯಸ್ ಸಂಬಂಧಿ ಮನೆಗೆ ಈ ವಿದ್ಯಾರ್ಥಿಗಳು ತೆರಳಿದ್ದು, ಪೀಣ್ಯ ಬಡಾವಣೆಯ ಶ್ವೇತಾ ಎಂಬವರ ಮನೆಯಲ್ಲಿ ಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.

- Advertisement -

Related news

error: Content is protected !!