Wednesday, April 23, 2025
spot_imgspot_img
spot_imgspot_img

ವಿಹಿಂಪ-ಬಜರಂಗದಳ ಕಾರ್ಯಕರ್ತರ ಸೇವೆ ಹಾಗೂ ಸಹಕರಿಸಿದ ಗಣ್ಯರಿಗೆ ಅಭಿನಂದಿಸಿದ ಶಾಸಕ ಡಾ.ಭರತ್ ಶೆಟ್ಟಿ

- Advertisement -
- Advertisement -

ವಿಶ್ವ ಹಿಂದೂ ಪರಿಷತ್ ಬಜರಂಗದಳ ಧರ್ಮ ಶಾಸ್ತ ಶಾಖೆ ಜ್ಯೋತಿನಗರ ಹಾಗೂ ಕಾವೂರು ಪ್ರಖಂಡದ ಅಧ್ಯಕ್ಷ ಶಿವರಾಜ್ ಕಾವೂರ್ ಇವರ ನೇತೃತ್ವದಲ್ಲಿ ಜ್ಯೋತಿನಗರ, ಬಸವನಗರ ಹಾಗೂ ತಾರೀಪಾಡಿ ಗುಡ್ಡೆಯ ಯುವಕರು ರಸ್ತೆ ಬದಿಯ ಸುಮಾರು 300 ಕ್ಕೂ ಹೆಚ್ಚು ಸಂತ್ರಸ್ಥರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಸತತ 33 ದಿನಗಳಿಂದ ಮಾಡುತ್ತ ಬಂದಿರುತ್ತಾರೆ.

ಪ್ರತಿ ದಿನ ಊಟ ತಯಾರು ಮಾಡಿ ಕಾವೂರು, ಕುಳೂರು, ಮತ್ತು ಲೇಡಿಗೋಶನ್ ಹಾಸ್ಪಿಟಲ್ ಬಳಿ ಊಟವನ್ನು ವಿತರಿಸಲಾಗುತ್ತಿದೆ. ಭಾನುವಾರ ಅಲ್ಲಿ ಭೇಟಿ ಕೊಟ್ಟ ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈಭರತ್ ಶೆಟ್ಟಿಯವರು ವಿಹಿಂಪ-ಬಜರಂಗದಳದ ಕಾರ್ಯಕರ್ತರ ಸೇವೆಯನ್ನು ಶ್ಲಾಘಿಸಿದರು.

ಇವರಿಗೆ ಪ್ರತಿ ಭಾನುವಾರದ ಊಟದ ವ್ಯವಸ್ಥೆಗೆ ಸಹಕರಿಸಿದ TCCOH (R)ದಕ್ಷಿಣ ಕನ್ನಡ ಡಿವಿಜನ್ ಸರ್ವ ಸದಸ್ಯರು ಮತ್ತು ಆ ಸಂಘದ ಗೌರವಾನ್ವಿತ ಸದಸ್ಯ ಮನೋಜ್ ಅಳಪೆ ಪಡೀಲ್ (ಮಂಗಳಾದೇವಿ ಟ್ರಾವೆಲ್ಸ್), ಸುರೇಶ ದೇವಾಡಿಗ (ಮಹೇಶ್ವರಿ ಟ್ರಾವೆಲ್ಸ್) ಹಾಗೂ ಅಡುಗೆ ತಯಾರು ಮಾಡಿದ ಅಡುಗೆ ಭಟ್ಟರಾದ ಲಕ್ಷ್ಮಣ್ ಕೃಷ್ಣ ನಗರ ಹಾಗೂ ಸಹಕರಿಸಿದ ಎಲ್ಲಾ ಯುವಕರ ಸೇವೆಯನ್ನು ಶಾಸಕರು ಮೆಚ್ಚಿ ಶ್ಲಾಘನೀಯ ಕಾರ್ಯಕ್ಕೆ ಅಭಿನಂದಿಸಿದರು.

- Advertisement -

Related news

error: Content is protected !!