Sunday, June 29, 2025
spot_imgspot_img
spot_imgspot_img

ಮಾಸ್ಕ್‌ ಧರಿಸಿ, ಅಂತರ ಕಾಪಾಡಿ, ಇದುವೇ ನನಗೆ ಜನ್ಮದಿನದ ಉಡುಗೊರೆ: ಪ್ರಧಾನಿ ನರೇಂದ್ರ ಮೋದಿ.

- Advertisement -
- Advertisement -

ನವದೆಹಲಿ: ಗುರುವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ 70ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆಗೆ ದೇಶಗಳ ಮಾತ್ರವಲ್ಲದೇ ವಿದೇಶಗಳ ಗಣ್ಯರೂ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ. ಪ್ರಧಾನಿಯವರು ಜನರ ಬಳಿ ತಮ್ಮ ಹುಟ್ಟುಹಬ್ಬದ ಉಡುಗೊರೆಯನ್ನು ಕೂಡ ಕೇಳಿದ್ದಾರೆ.

ಕೊರೋನಾದಿಂದ ರಕ್ಷಣೆ ಪಡೆಯಲು ಬೇಕಾದ ಅಗತ್ಯ ಕ್ರಮಗಳನ್ನು ಅನುಸರಿಸುವುದೇ ನೀವು ನನಗೆ ನೀಡುವ ಉಡುಗೊರೆ ಎಂಬುದಾಗಿ ಮೋದಿ ಹೇಳಿದ್ದಾರೆ.ಗುರುವಾರ ತಡರಾತ್ರಿ ಟ್ವೀಟ್ ಮಾಡಿರುವ ಮೋದಿಯವರು, “ಅನೇಕ ಮಂದಿ ಜನ್ಮದಿನದ ಉಡುಗೊರೆ ಏನು ಬೇಕು ಎಂದು ನನ್ನಲ್ಲಿ ಕೇಳುತ್ತಿದ್ದಾರೆ. ಹೀಗಾಗಿ ನನಗೇನು ಬೇಕು ಎಂಬುದನ್ನು ನಾನು ಹೇಳುತ್ತೇನೆ.

ಅದೇನೆಂದರೆ:

  1. ಮಾಸ್ಕ್ ಧರಿಸಿ ಮತ್ತು ಸರಿಯಾದ ರೀತಿಯಲ್ಲಿ ಧರಿಸಿ
  2. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ. ಕನಿಷ್ಠ ಎರಡು ಗಜಗಳ ಅಂತರದಲ್ಲಿರಿ.
  3. ಜನಸಂದಣೆಯ ಜಾಗಗಳಿಂದ ದೂರವಿರಿ.
  4. ರೋಗ ನಿರೋಧಕ ಶಕ್ತಿಯನ್ನು ಸಾಧ್ಯವಾದಷ್ಟು ಹೆಚ್ಚಿಸಿಕೊಳ್ಳಿ.
  5. ಎಲ್ಲರೂ ಒಗ್ಗೂಡಿ ನಮ್ಮ ಜಗತ್ತನ್ನು ಆರೋಗ್ಯಕರವಾಗಿಸಲು ಸಹಕರಿಸಿ.
- Advertisement -

Related news

error: Content is protected !!