Tuesday, July 21, 2026
spot_imgspot_img
spot_imgspot_img

ಇಟಲಿ ಪ್ರಧಾನಿ ಮೆಲೋನಿಗೆ ಮೆಲೋಡಿ ಚಾಕೋಲೇಟ್ ಗಿಫ್ಟ್ ಕೊಟ್ಟ ಮೋದಿ

- Advertisement -
- Advertisement -

ರೋಮ್: ಪ್ರಧಾನಿ ನರೇಂದ್ರ ಮೋದಿ ಇಟಲಿಯ ರಾಜಧಾನಿ ರೋಮ್‌ಗೆ ಭೇಟಿ ನೀಡಿದ ವೇಳೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಗೆ ‘ಮೆಲೋಡಿ’ ಚಾಕೋಲೇಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ತಮ್ಮಐದು ದಿನಗಳ ವಿದೇಶ ಪ್ರವಾಸದ ಅಂತಿಮ ಹಂತದಲ್ಲಿ ಅವರು ಬುಧವಾರ ರೋಮ್‌ಗೆ ಭೇಟಿ ನೀಡಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಜಾರ್ಜಿಯಾ ಮೆಲೋನಿ, “ನಿಮ್ಮ ಉಡುಗೊರೆಗೆ ಧನ್ಯವಾದ ಪ್ರಧಾನಿ ಮೋದಿ” ಎಂದು ಬರೆದುಕೊಂಡಿದ್ದಾರೆ.

ಅವರು ಹಂಚಿಕೊಂಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, “ಪ್ರಧಾನಿ ಮೋದಿ ನನಗೆ ಒಳ್ಳೆಯ ಉಡುಗೊರೆ ನೀಡಿದ್ದು, ತುಂಬಾ ಒಳ್ಳೆಯ ಮೆಲೋಡಿ ಚಾಕೊಲೇಟ್ ನೀಡಿದ್ದಾರೆ” ಎಂದು ಹೇಳಿಕೊಂಡಿದ್ದಾರೆ.

ಈ ಇಬ್ಬರು ನಾಯಕರು ಈ ಹಿಂದೆ ಭೇಟಿಯಾಗಿದ್ದಾಗ ‘ಮೆಲೋಡಿ’ ಹೆಸರು ಜನಪ್ರಿಯಗೊಂಡಿತ್ತು. ಮೋದಿ ಹಾಗೂ ಮೆಲೋನಿ ಎಂಬ ಉಪನಾಮಗಳನ್ನು ಬಳಸಿಕೊಂಡು ಈ ಪದವನ್ನು ಸೃಷ್ಟಿಸಲಾಗಿತ್ತು.

- Advertisement -

Related news

error: Content is protected !!