- Advertisement -
- Advertisement -
ಲಡಾಖ್: ಚೀನಾ ಹಾಗು ಭಾರತದ ನಡುವೆ ನಡೆದ ಸಂಘರ್ಷದ ಬಳಿಕ ಪ್ರಧಾನಿ ನರೇಂದ್ರ ಮೋದಿ ಲಡಾಖ್‌ಗೆ ಧಿಡೀರ್ ಭೇಟಿ ನೀಡಿದ್ದಾರೆ.
ಜೂನ್ 15 ರ ನಡೆದ ಸಂಘರ್ಷದ ಬಳಿಕ ಭಾರತ-ಚೀನಾ ನಡುವಿನ ಗಡಿ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿದೆ. ಹೀಗಾಗಿ ಮೋದಿ ಅವರ ಲಡಾಖ್‌ನ ಲೇಹ್ ಭೇಟಿ ಮತ್ತಷ್ಟು ಕುತೂಹಲ ಮೂಡಿಸಿದೆ.
ಇಂದು ಬೆಳಗ್ಗೆಯೇ ಲಡಾಖ್‌ಗೆ ತಲುಪಿರುವ ಮೋದಿ, ಸೇನಾ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ. ಜೊತೆಗೆ ಗಡಿಯಲ್ಲಿನ ಭದ್ರತೆ ಬಗ್ಗೆ ಸೇನಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.ಗಡಿ ಬಿಕ್ಕಟ್ಟು ಸಂಬಂಧಿಸಿದಂತೆ ಈವರೆಗೆ ಚೀನಾ-ಭಾರತ ನಡುವೆ ಮೂರು ಸುತ್ತಿನ ಸೇನಾ ಮುಖಂಡರ ಸಭೆ ನಡೆದಿದೆ.
- Advertisement -