ಕೊರೊನಾ ಸೋಂಕಿನ ವಿರುದ್ದದ ಹೋರಾಟ ಹಾಗೂ ಜೀವ ರಕ್ಷಣೆಗಾಗಿ ಕೊರೊನಾ ಲಸಿಕೆ ಅತ್ಯಗತ್ಯ; ಪ್ರಧಾನಿ ಮೋದಿ

ನವದೆಹಲಿ: ಶತಮಾನಗಳಲ್ಲಿ ವಿಶ್ವವು ಈ ರೀತಿಯಾದ ಸಾಂಕ್ರಾಮಿಕವನ್ನು ಕಂಡಿಲ್ಲ. ಕೊರೊನಾದ ನಂತರ ಜಗತ್ತು ಮೊದಲಿನ ರೀತಿ ಇರುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಯವರು ತಿಳಿಸಿದ್ದಾರೆ.

ಬುದ್ಧಪೂರ್ಣಿಮೆಯ ಅಂಗವಾಗಿ ಆಯೋಜಿಸಿದ್ದ ವರ್ಚುವಲ್‌ ವೆಸಾಕ್‌ ಗ್ಲೋಬಲ್‌ ಸೆಲೆಬ್ರೇಷನ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ರೀತಿಯಾದ ಸಾಂಕ್ರಾಮಿಕವನ್ನು ಜಗತ್ತು ಶತಮಾನಗಳಲ್ಲಿ ಕಂಡಿಲ್ಲ. ಭವಿಷ್ಯದಲ್ಲಿ ನಡೆಯಲಿರುವ ಘಟನೆಗಳನ್ನು ಕೊರೊನಾ ಪೂರ್ವ ಅಥವಾ ಕೊರೊನಾ ಬಳಿಕದ ಘಟನೆ ಎಂದು ನೆನಪಿಸಲಾಗುತ್ತದೆ ಎಂದಿದ್ದಾರೆ.

ಪ್ರಸ್ತುತ ನಮಗೆ ಕೊರೊನಾ ಸೋಂಕಿನ ಕುರಿತು ಮೊದಲಿಗಿಂತ ಹೆಚ್ಚಿನ ತಿಳುವಳಿಕೆ ಇದೆ. ಕೊರೊನಾ ಸೋಂಕಿನ ವಿರುದ್ದದ ಹೋರಾಟ ಹಾಗೂ ಜೀವ ರಕ್ಷಣೆಗಾಗಿ ಕೊರೊನಾ ಲಸಿಕೆ ಮುಖ್ಯ ಎಂದು ಹೇಳಿದ್ದಾರೆ.