Sunday, May 19, 2024
spot_imgspot_img
spot_imgspot_img

ಮೂಡುಬಿದಿರೆ: (ಡಿ.14 ರಿಂದ 17 ) 29 ನೇ ವರ್ಷದ ಆಳ್ವಾಸ್ ವಿರಾಸತ್ 2023 ರಾಷ್ಟೀಯ ಸಾಂಸ್ಕೃತಿಕ ಉತ್ಸವ

- Advertisement -G L Acharya panikkar
- Advertisement -

ಮೂಡುಬಿದಿರೆ: ರಾಜರ್ಷಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ದೇಶಕ್ಕಾಗಿ ದೇಹತ್ಯಾಗ ಮಾಡಿದ ವೀರಯೋಧ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅವರಿಗೆ ಅರ್ಪಣೆ 29 ನೇ ವರ್ಷದ ಆಳ್ವಾಸ್ ವಿರಾಸತ್ 2023 ರಾಷ್ಟೀಯ ಸಾಂಸ್ಕೃತಿಕ ಉತ್ಸವವು ಡಿ.14 ರಿಂದ 17 ರ ವರೆಗೆ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲುರಂಗ ಮಂದಿರ, ವಿವೇಕಾನಂದ ನಗರ, ಪುತ್ತಿಗೆ ಮೂಡುಬಿದಿರೆ, ದಕ್ಷಿಣ ಕನ್ನಡ ಇಲ್ಲಿ ನಡೆಯಲಿದೆ.

ಉದ್ಘಾಟನಾ ಸಮಾರಂಭ ಡಿ.14 ಗುರುವಾರ ಸಂಜೆ 5:30ಕ್ಕೆ ಗೌರವಾನ್ವಿತ ರಾಜ್ಯಪಾಲರಿಗೆ ಗೌರವ ರಕ್ಷೆ ನಡೆಯಲಿದೆ. ಸಂಜೆ 5:45 -6:30 ಕ್ಕೆ ಸಭಾಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಸರಕಾರ ರಾಜ್ಯಪಾಲ ಗೌರವಾನ್ವಿತ ಡಾ. ಥಾವರ್‍ ಚಂದ್ ಗೆಹ್ಲೋಟ್ ವಹಿಸಲಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ, ರಾಜರ್ಷಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದಾರೆ.

ಮೂಲ್ಕಿ- ಮೂಡಬಿದಿರೆ ವಿಧಾನಸಭಾ ಕ್ಷೇತ್ರ ಶಾಸಕ ಉಮಾನಾಥ ಎ. ಕೋಟ್ಯಾನ್, ದಕ್ಷಿಣ ಕನ್ನಡ ಜಿಲ್ಲೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಮ್.ಪಿ., ಕರ್ನಾಟಕ ಸರ್ಕಾರ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ,ಕರ್ನಾಟಕ ಭಾರತ್ ಸ್ಕೌಟ್ಸ್ ಗೈಡ್ಸ್ ರಾಜ್ಯ ಆಯುಕ್ತಕ ಪಿ.ಜಿ.ಆರ್‍. ಸಿಂದ್ಯ, ಬೆಂಗಳೂರು,ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ. ಬಿ.ಎಲ್.ಶಂಕರ್‍, ಉಡುಪಿ ಜಿ. ಶಂಕರ್‍ ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ನಾಡೋಜ ಡಾ. ಜಿ. ಶಂಕರ್‍, ಎಸ್,ಸಿ,ಡಿ,ಸಿ,ಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರಕುಮಾರ್‍ ,ಮಂಗಳೂರು ಎಂಆರ್‌ಜಿ ಗ್ರೂಪ್ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಅದಾನಿ ಗ್ರೂಪ್ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್‍ ಆಳ್ವ, ಬರೋಡ ಉದ್ಯಮಿ ಶಶಿಧರ ಶೆಟ್ಟಿ, ಬೆಂಗಳೂರು ಉದ್ಯಮಿ ಪ್ರಸನ್ನ ಶೆಟ್ಟಿ, ಮಂಗಳೂರು ಗಣಿ ಉದ್ಯಮಿ ರವೀಂದ್ರನಾಥ ಆಳ್ವ, ಬಂಟ್ವಾಳ ಬಡಜಗುತ್ತು , ರವಿಶಂಕರ್‍ ಶೆಟ್ಟಿ, ಮೂಡಬಿದಿರೆ ಜಯಶ್ರೀ ಅಮರನಾಥ ಶೆಟ್ಟಿ, ಮೂಡಬಿದಿರೆ ಉದ್ಯಮಿ ಕೆ. ಶ್ರೀಪತಿ ಭಟ್, ಪುತ್ತಿಗರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಧ, ಮಂಗಳೂರು ಭಾರತ್ ಕನ್ಸ್‌ಸ್ಟ್ರಕ್ಷನ್ಸ್ ಮುಸ್ತಾಫಾ ಎಸ್.ಎಂ, ಮೂಡಬಿದಿರೆ ಭಿಮಲ್ ಕನ್ಸ್‌ಸ್ಟ್ರಕ್ಷನ್ಸ್ ಪ್ರವೀಣ್ ಕುಮಾರ್‍ ಗೌರವ ಉಪಸ್ಥಿತರಿರುವರು.

ಸಂಜೆ 6:35- ರಾತ್ರಿ 8:00 ಕ್ಕೆ ಆಳ್ವಾಸ್ ವಿರಾಸತ್- 2023 ಭವ್ಯ ಸಾಂಸ್ಕೃತಿ ಮೆರವಣಿಗೆ 100 ಕ್ಕಿಂತಲೂ ಅಧಿಕ ದೇಶೀಯ ಜಾನಪದ ಕಲಾತಂಡಗಳ 3000 ಕ್ಕೂ ಮಿಕ್ಕಿದ ಕಲಾವಿದರಿಂದ ವೈವಿಧ್ಯಮಯ ಭವ್ಯ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ರಾತ್ರಿ 8:05-9:00 ಕ್ಕೆ ವೇದಘೋಷಗಳು, ಭಜನ್‌ಗಳು, ಪುಷ್ಪಪಲ್ಲಕ್ಕಿಗಳು, ಮಂಗಳವಾದ್ಯಗಳೊಂದಿಗೆ ವಿಘ್ನನಿವಾರಕ ವಿನಾಯಕ, ಸರಸ್ವತಿ, ಶ್ರೀಲಕ್ಷ್ಮೀ, ಹನಿಮಂತ , ಶ್ರೀರಾಮ, ಶ್ರೀಕೃಷ್ಣಾದಿ ಆರೊಢ ದೇವರ ಸಾಂಸ್ಕೃತಿಕ ರಥ ಸಂಚಲನ ಮತ್ತು ರಥಾರತಿ ನಡೆಯಲಿದೆ.

ಡಿ.15 ಶುಕ್ರವಾರ ಸಂಜೆ 5:45ಕ್ಕೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನ, 5:55 ಕ್ಕೆ ಕಲಾವಿದರಿಗೆ ಸಾಂಪ್ರಾದಾಯಿಕ ಸ್ವಾಗತ ಬಳಿಕ , ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕ ಬೆನ್ನಿ ದಯಾಲ್ ಇವರಿಂದ ಗಾನ ವೈಭವ , ರಾತ್ರಿ 8:00-9:00 ಕ್ಕೆ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿದೆ.

ಡಿ. 16 ಶನಿವಾರ ಸಂಜೆ 5:45ಕ್ಕೆ ದೀಪ ಪ್ರಜ್ವಲನ, 5:55 ಕ್ಕೆ ಕಲಾವಿದರಿಗೆ ಸಾಂಪ್ರಾದಾಯಿಕ ಸ್ವಾಗತ , ಬಳಿಕ ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕರಾದ ಶ್ರೇಯಾ ಘೋಷಾಲ್ ಇವರಿಂದ ಭಾವ ಲಹರಿ, ರಾತ್ರಿ 8:00-9:00 ಕ್ಕೆ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿದೆ.

ಡಿ.17 ರವಿವಾರ ಸಂಜೆ 5:15- 6:15 ಕ್ಕೆ ಆಳ್ವಾಸ್ ವಿರಾಸತ್ – 2023 ಪ್ರಶಸ್ತಿ ಪುರಸ್ಕೃತರು ಡಾ. ಮೈಸೂರು ಮಂಜುನಾಥ್, ಡಾ. ಪ್ರವೀಣ್ ಹೋಡ್ಖಿಂಡಿ, ವಿಜಯ ಪ್ರಕಾಶ್ ಪ್ರಶಸ್ತಿ ಪ್ರದಾನ ನಡೆಯಿಲಿದೆ. 6:30-7:15 ಕ್ಕೆ ಡಾ. ಮೈಸೂರು ಮಂಜುನಾಥ್, ಡಾ. ಪ್ರವೀಣ್ ಹೋಡ್ಖಿಂಡಿ, ವಿಜಯ ಪ್ರಕಾಶ್ ಮತ್ತು ಬಳಗ ಇವರಿಂದ ತಾಳ-ವಾದ್ಯ- ಸಂಗೀತ ನಡೆಯಲಿದೆ. ರಾತ್ರಿ 7:30-9:30 ಕ್ಕೆ ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್ ಇವರಿಂದ ಸಂಗೀತ ರಸಸಂಜೆ, ಬಳಿಕ 9:30- 10:15 ಕ್ಕೆ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿದೆ.

- Advertisement -

Related news

error: Content is protected !!