Tuesday, July 21, 2026
spot_imgspot_img
spot_imgspot_img

ಮೂಡುಬಿದಿರೆ: ಅಕ್ರಮ ಕೂಟ ಕಟ್ಟಿಕೊಂಡು ಕೋಳಿ ಅಂಕ ನಡೆಸುತ್ತಿದ್ದ ಅರೋಪಿಗಳ ಬಂಧನ

- Advertisement -
- Advertisement -

ಕೋಳಿ ಅಂಕದ ನೇತೃತ್ವ ವಹಿಸಿದ ರಾಜೇಂದ್ರ ಪೂಜಾರಿ ಹಾಗೂ ರಾಜೇಶ್ ಬಲ್ಲಾಳ್ ಚೇಲಾಗಳಿಂದ ಧಮ್ಕಿ….!

ವರದಿ ಪ್ರಕಟಿಸಿದ ಮಾಧ್ಯಮ ಪ್ರತಿನಿಧಿಗೆ ನ್ಯೂಸ್ ಡಿಲೀಟ್ ಮಾಡುವಂತೆ ಬೆದರಿಕೆ..!!

ಮೂಡುಬಿದಿರೆ ಪೊಲೀಸ್ ಠಾಣಾ ಸರಹದ್ದಿನ ಮೂಡುಮೂರ್ನಾಡು ಗ್ರಾಮದ ಹೊಯಿಪಾಲಬೆಟ್ಟು ಎಂಬಲ್ಲಿ ಮಾ.18 ರಂದು ಶ್ರೀ ಕೊಡಮಣಿತ್ತಾಯ ಹಾಗೂ ಬ್ರಹ್ಮ ಬೈದರ್ಕಳ ವರ್ಷಾವಧಿ ಜಾತ್ರೆಯು ಮುಗಿದ ಬಳಿಕ ರಾಜೇಂದ್ರ ಪೂಜಾರಿ ಹಾಗೂ ರಾಜೇಶ್ ಬಲ್ಲಾಳ್ ರವರ ನೇತೃತ್ವದಲ್ಲಿ ಕೆಲವು ವ್ಯಕ್ತಿಗಳು ಅಕ್ರಮವಾಗಿ ಸೇರಿಕೊಂಡು ಕೋಳಿಗಳಿಗೆ ಹರಿತವಾದ ಬಾಲ್ ಗಳನ್ನು ಕಟ್ಟಿ ಹಿಂಸಾತ್ಮಕವಾಗಿ ಕಾದಾಡಲು ಬಿಟ್ಟು ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಸುತ್ತಿದ್ದರು.

ಈ ಬಗ್ಗೆ ದಾಳಿ ನಡೆಸಿ ಕೋಳಿ ಅಂಕದಲ್ಲಿ ನಿರತರಾಗಿದ್ದ 6 ಜನ ಅರೋಪಿಗಳನ್ನು ಹಾಗೂ ಕೋಳಿ ಅಂಕದಲ್ಲಿ ಪಣಕ್ಕಿಟ್ಟಿದ್ದ 1480/- ರೂ ಹಣವನ್ನು ಹಾಗೂ 17 ಜೀವಂತ ಹುಂಜಗಳು ಮತ್ತು ಕೋಳಿ ಅಂಕಕ್ಕೆ ಬಳಸುವ ಎರಡು ಬಾಲುಗಳನ್ನು ವಶಕ್ಕೆ ಪಡೆದು ದೈವಸ್ದಾನದ ವ್ಯವಸ್ಥಾಪನಾ ಸಮಿತಿ ಹಾಗೂ ಆರೋಪಿಗಳ ಮೇಲೆ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಅ ಕ್ರ 30/2026 ಕಲಂ 189(2), 193 ಜೊತೆಗೆ 190 ಬಿ ಎನ್ ಎಸ್ ಮತ್ತು 87, 93 ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 11(1)(ಟಿ) ಪ್ರಾಣಿ ಹಿಂಸಾ ಪ್ರತಿಬಂಧಕ ಕಾಯ್ದೆ 1960 ರಂತೆ ಪ್ರಕರಣ ದಾಖಲಾಗಿತ್ತು.

ಮಂಗಳೂರು ನಗರ ಕಮಿಷನರ್ ಕಚೇರಿಯಿಂದ ಬಂದ ಅಧಿಕೃತ ಮಾಹಿತಿಯ ಪ್ರಕಾರ ಮಾಧ್ಯಮ ಮತ್ತು ಪತ್ರಿಕೆಗಳಲ್ಲಿ ಈ ಬಗ್ಗೆ ವರದಿಯಾಗಿತ್ತು.

ಈ ಘಟನೆಗೆ ಸಂಬಂಧಪಟ್ಟಂತೆ ವರದಿ ಮಾಡಿದ ಮಾಧ್ಯಮ ಪ್ರತಿನಿಧಿಯೊಬ್ಬರಿಗೆ ಕೋಳಿ ಅಂಕದ ಜೂಜುಕೋರರು ಅಕ್ರಮ ಕೋಳಿ ಅಂಕದ ನೇತೃತ್ವ ವಹಿಸಿದ್ದ ರಾಜೇಂದ್ರ ಪೂಜಾರಿ ಹಾಗೂ ರಾಜೇಶ್ ಬಲ್ಲಾಳ್ ರವರ ಪರ ಬ್ಯಾಟಿಂಗ್ ಮಾಡಿ ನ್ಯೂಸ್ ಡಿಲೀಟ್ ಮಾಡುವಂತೆ ಧಮ್ಕಿ ಹಾಕಿದ್ದಾರೆ.

ಇದಕ್ಕೆ ಮಾಧ್ಯಮ ಪ್ರತಿನಿಧಿ ಕೋಳಿ ಅಂಕದ ಜೂಜುಕೋರರಿಗೆ ತನ್ನದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ.

- Advertisement -

Related news

error: Content is protected !!