Friday, July 31, 2026
spot_imgspot_img
spot_imgspot_img

ಮೂಡುಬಿದಿರೆ: ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317D ವತಿಯಿಂದ ಲಯನ್ ಸಂಸ್ಥಾಪಕರಾದ ಮೆಲ್ವಿನ್ ಜೋನ್ಸ್ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮ

- Advertisement -
- Advertisement -

ಮೂಡುಬಿದಿರೆ: ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317D ವತಿಯಿಂದ ಸಂಸ್ಥೆಯ ಸಂಸ್ಥಾಪಕರಾದ ಮೆಲ್ವಿನ್ ಜೋನ್ಸ್ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮವು ಆಗಸ್ಟ್ 1ರಂದು ಮೂಡುಬಿದಿರೆಯ ಕೀರ್ತಿ ನಗರದಲ್ಲಿರುವ ಲಯನ್ಸ್ ಸೇವಾಭವನಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.

ಮೆಲ್ವಿನ್ ಜೋನ್ಸ್ ಅವರ ಪ್ರತಿಮೆಯನ್ನು ಮಾಜಿ ಇಂಟರ್ನ್ಯಾಷನಲ್ ಡೈರೆಕ್ಟರ್ ಜೆಪಿ ಸಿಂಗ್ ಅವರು ಅನಾವರಣಗೊಳಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಜಿಲ್ಲೆಯ ನಿಕಟಪೂರ್ವ ರಾಜ್ಯಪಾಲರಾದ ಕುಡ್ಪಿ ಅರವಿಂದ ಶೆಣೈ ಅಧ್ಯಕ್ಷತೆ ವಹಿಸಲಿದ್ದು, ಪ್ರಥಮ ಉಪರಾಜ್ಯಪಾಲ ಗೋವರ್ಧನ್ ಶೆಟ್ಟಿ, ದ್ವಿತೀಯ ಉಪರಾಜ್ಯಪಾಲ ವೆಂಕಟೇಶ್ ಹೆಬ್ಬಾರ್, ಮೂಡಬಿದ್ರೆ ಟ್ರಸ್ಟ್ ನ ಅಧ್ಯಕ್ಷರು, ಕ್ಲಬ್ ನ ಅಧ್ಯಕ್ಷರು, ಹಾಗೂ ಪದಾಧಿಕಾರಿಗಳು ಉಪಸ್ಥಿತರಿರಲಿದ್ದು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ನಿಕಟ ಪೂರ್ವ ಜಿಲ್ಲಾ ಸಂಪರ್ಕ ಅಧಿಕಾರಿ ಸುದರ್ಶನ್ ಪಡಿಯಾರ್ ವಿಟ್ಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!