Sunday, October 6, 2024
spot_imgspot_img
spot_imgspot_img

 *ಕರ್ನಾಟಕದಲ್ಲಿ ತಾಯಂದಿರ ಮರಣ ಪ್ರಮಾಣ ಹೆಚ್ಚು..!*

- Advertisement -
- Advertisement -

ವರದಿ: ನ್ಯೂಸ್ ಡೆಸ್ಕ್, ವಿ ಟಿವಿ

ನವದೆಹಲಿ: ಹೆರಿಗೆ ಸಂದರ್ಭದಲ್ಲಿ ತಾಯಂದಿರ ಮರಣ ಪ್ರಮಾಣದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಭಾರತ ಸರ್ಕಾರದ ಆರೋಗ್ಯ ಇಲಾಖೆ ತಿಳಿಸಿದೆ. 2016 ರಿಂದ 2018ರವರೆಗೆ ಹೆರಿಗೆ ವೇಳೆ ತಾಯಂದಿರ ಮರಣ ಪ್ರಮಾಣ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಈ ಆಘಾತಕಾರಿ ಸುದ್ದಿಯನ್ನು ಹೊರಹಾಕಿದೆ.

ಈ 5 ರಾಜ್ಯಗಳಲ್ಲಿ ತಾಯಂದಿರ ಮರಣ ಪ್ರಮಾಣ ಅಧಿಕ..!*
ದಕ್ಷಿಣ ಭಾರತದ 5 ರಾಜ್ಯಗಳಲ್ಲಿ ಹೆರಿಗೆ ಸಂದರ್ಭದಲ್ಲಿ ತಾಯಂದಿರುವ ಸಾವನ್ನಪ್ಪಿದ ಸಂಖ್ಯೆ ಹೆಚ್ಚಿದೆ ಎಂದು ಅಂಕಿ ಅಂಶ ತಿಳಿಸಿದೆ. 2016ರಿಂದ 2018ರವರೆಗೆ ಕರ್ನಾಟಕದಲ್ಲಿ 92 ಮಂದಿ ತಾಯಂದಿರು ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶ(65), ತೆಲಂಗಾಣ(63), ಕೇರಳ(43), ತಮಿಳುನಾಡು(60) ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.

ಮರಣ ಪ್ರಮಾಣ ಕಡಿಮೆಯಾದ್ರೂ ಪ್ರಗತಿ ಸಾಧಿಸಿಲ್ಲ
ರಾಜ್ಯದಲ್ಲಿ  ಹೆರಿಗೆ ವೇಳೆ ತಾಯಂದಿರ ಮರಣ ಪ್ರಮಾಣ ಕಡಿಮೆಯಾದ್ರೂ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ ಎಂದು ವರದಿ ತಿಳಿಸಿದೆ. 2014ರ ವರದಿ ಪ್ರಕಾರ ರಾಜ್ಯದಲ್ಲಿ ಒಂದು ಲಕ್ಷ ಹೆರಿಗೆ 108 ಮಂದಿ ತಾಯಂದಿರು ಸಾವನ್ನಪ್ಪಿದ್ದರು. 2016-17ರಲ್ಲಿ ಅದರ ಪ್ರಮಾಣ 97ಕ್ಕೆ ಇಳಿಕೆಯಾಗಿದೆ. ಇದೀಗ 2016-18ರ ವರದಿಯಲ್ಲಿ ಒಂದು ಲಕ್ಷ ಹೆರಿಗೆಯಲ್ಲಿ 92 ತಾಯಂದಿರು ಮೃತಪಟ್ಟಿದ್ದಾರೆ ಎಂದು ಅಂಕಿ ಅಂಶಗಳಿಂದ ತಿಳಿದುಬಂದಿದೆ.

ತಾಯಂದಿರ ಆರೋಗ್ಯಕ್ಕಾಗಿ ಉತ್ತಮ ಯೋಜನೆ*
ಕರ್ನಾಟಕ ತಾಯಂದಿರ ಆರೋಗ್ಯ ಕಾರ್ಯಕ್ರಮದ ಅಧಿಕಾರಿ ಡಾ.ರಾಜ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಎಲ್ಲ ಪ್ರಸೂತಿ ತಜ್ಞರು, ಮಕ್ಕಳ ವೈದ್ಯರು ಮತ್ತು ಅರಿವಳಿಕೆ ತಜ್ಞರು ಎಂಸಿಎಚ್ ಸೇವೆಗಳು ಎಲ್ಲ ಪ್ರದೇಶಗಳಲ್ಲಿ 24 ಗಂಟೆ ಲಭ್ಯವಾಗುವಂತೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಪ್ರಸ್ತುತ, ಈ ತಜ್ಞರಲ್ಲಿ ಅನೇಕರು ತಮ್ಮ ವಿಶೇಷತೆಗೆ ಸಂಬಂಧಿಸಿದ ಸಾಂದರ್ಭಿಕ ಮತ್ತು ತುರ್ತು ಸೇವೆಗಳಿಗೆ ಹಾಜರಾಗುವಂತೆ ಮಾಡಲಾಗಿದೆ.  ಗರ್ಭಿಣಿಯರು ಆರೈಕೆ ಬಯಸುತ್ತಿರುವುದರಿಂದ ಸೆಕ್ಟರ್ ಆಸ್ಪತ್ರೆಗಳು ತುರ್ತು ಅಗತ್ಯವಾಗಿದೆ. ಮುಂದಿನ ತಿಂಗಳಿನಿಂದ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ಸಂಸ್ಥೆಯ ಸಹಯೋಗದೊಂದಿಗೆ ಕೌಶಲ್ಯ ವರ್ಗಾವಣೆಗಾಗಿ ಏಷ್ಯನ್ ರಿಸರ್ಚ್ ಅಂಡ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ,ಮಾನ್ಯತಾ ಪ್ರಮಾಣೀಕರಣ ಕಾರ್ಯಕ್ರಮವನ್ನು ಜಾರಿಗೆ ತರಲಿದೆ. ಇದರಲ್ಲಿ ರಾಜ್ಯದ ತಾಯಿಯ ಆರೋಗ್ಯ ಯೋಜನೆಗಳಲ್ಲಿ ತಾಯಿ ಭಾಗ್ಯ, ಪ್ರಸೂತಿ ಆರೈಕೆ, ಜನನಿ ಸುರಕ್ಷ ಯೋಜನೆ, ಮತ್ತು ಜನನಿ ಶಿಶು ಸುರಕ್ಷಾ ಕಾರ್ಯಕ್ರಮ ಸೇರಿವೆ ಎಂದು ಮಾಹಿತಿ ನೀಡಿದರು.

- Advertisement -

Related news

error: Content is protected !!